Haridasa Sahitya — Vyasadasa
Hetta tayiginta atyadhika
ಹೆತ್ತ ತಾಯಿಗಿಂತ ಅತ್ಯಧಿಕ
Composer: Kanakadasaru · Deity: Hari · Genre: Philosophy
Kannada lyrics
ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ ।।ಪ॥ ವಿತ್ತವುಳ್ಳವನ ಕುಲ ಎಣಿಸುವುದುಂಟೆ ಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ ।।೧।। ಅತ್ತೆಮನೆ ಸೇರುವಗೆ ಅಭಿಮಾನವುಂಟೆ ಬತ್ತಲೆ ತಿರುಗುವಗೆ ಭಯವು ಇನ್ನುಂಟೆ ।।೨।। ಪೃಥ್ವಿಯೊಳಗೆ ಕಾಗಿನೆಲೆಯಾದಿ ಕೇಶವಗೆ ಮರ್ತ್ಯದೊಳನ್ಯ ದೇವರು ಸರಿಯುಂಟೆ ।।೩।।
Transliteration
Hetta tayiginta atyadhika mayavunte Uttama asvava katte holuvudunte ||pa|| Vittavullavana kula enisuvudunte Svarthake nyaya endadaru unte ||1|| Attemane seruvage abimanavunte Battale tiruguvage Bayavu innunte ||2|| Pruthviyolage kagineleyadi kesavage Martyadolanya devaru sariyunte ||3||