Haridasa Sahitya — Vyasadasa

Hetta tayi tandegala

ಹೆತ್ತ ತಾಯಿ ತಂದೆಗಳ

Composer: Purandara Dasaru · Deity: Hari · Genre: Philosophy

Kannada lyrics

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ ನಿತ್ಯ ದಾನವ ಮಾಡಿ ಫಲವೇನು? ಸತ್ಯ ಸದಾಚಾರ ಇಲ್ಲದವನು ಜಪ ಹತ್ತು ಸಾವಿರ ಮಾಡಿ ಫಲವೇನು?||೧|| ತನ್ನ ಸತಿ ಸುತರು ಬಂಧುಗಳ ನೋಯಿಸಿ ಚಿನ್ನ ದಾನವ ಮಾಡಿದರೆ ಫಲವೇನು? ಬಿನ್ನಣದಿಂದಲಿ ದೇಶ ದೇಶವ ತಿರುಗಿ ಅನ್ನ ದಾನವ ಮಾಡಿ ಫಲವೇನು?||೨|| ಗೌಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ ರೂಪ ಯೌವನವಿದ್ದು ಫಲವೇನು? ತಾಪತ್ರಯದ ಸಂಸಾರ ಕೆಡಿಸುವಂಥ ಪಾಪಿ ಮನು ಇದ್ದು ಫಲವೇನು? ||೩|| ತಾಂಡವ ಧನದಿಂದ ತಂದೆ ಮಾತು ಕೇಳದ ತುಂಡು ಮಗನು ಇದ್ದು ಫಲವೇನು? ಭಂಡುಮಾಡಿ ಅತ್ತಿ ಮಾವನ ಬೈವ ಮಂಡ ಸೊಸೆಯಿದ್ದು ಫಲವೇನು? ||೪|| ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿನೀರು ಕಾನನದೊಳಗಿದ್ದು ಫಲವೇನು? ಆನಂದ ಮೂರ…

Transliteration

Tanna sati sutaru bandhugala noyisi Cinna danava madidare palavenu? Binnanadindali desa desava tirugi Anna danava madi palavenu?||2|| Gaupya guna guttu illada hennige Rupa yauvanaviddu palavenu? Tapatrayada samsara kedisuvantha Papi manu iddu palavenu? ||3|| Tandava dhanadinda tande matu kelada Tundu maganu iddu palavenu? Bandumadi atti mavana baiva Manda soseyiddu palavenu? ||4|| Snanakke panakke…