Haridasa Sahitya — Vyasadasa
Hendati prana hinduti
ಹೆಂಡತಿ, ಪ್ರಾಣ ಹಿಂಡುತಿ
Composer: Purandara Dasaru · Deity: Hari · Genre: Philosophy
Kannada lyrics
ಹೆಂಡತಿ, ಪ್ರಾಣ ಹಿಂಡುತಿ ||ಪ|| ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ ||ಅ|| ಹೊತ್ತಾರೆ ಏಳುತ್ತಿ ಹೊರಗೆ ತಿರುಗಾಡುತ್ತಿ ಹೊತ್ತು ಹೋಯಿತು ಭತ್ಯ ತಾರೆನ್ನುತ್ತಿ ಉತ್ತಮ ಗುರುಹಿರಿಯರ ಮಾತು ಮೀರುತ್ತಿ ಮೃತ್ಯು ದೇವತೆಯಂತೆ ಮನೆಯೊಳಗಿರುತ್ತಿ || ಇಲ್ಲದ್ದು ಬೇಡುತ್ತಿ ಸುಳ್ಳು ಮಾತಾಡುತ್ತಿ ಒಳ್ಳೆ ಊಟವನುಂಡು ಕುಳಿತಿರ್ಪೆನೆಂತಿ ಎಳ್ಳಿನಷ್ಟು ಕೆಲಸ ಮಾಡಲಾರೆನೆಂತಿ ಎಲ್ಲೆಲ್ಲಿ ತಲೆಯೆತ್ತದ್ಹಾಂಗೆ ಮಾಡುತ್ತಿ || ಹಿರಿತನಕ್ಹೋಗುತ್ತಿ ಗರುವಿಕೆ ಮಾಡುತ್ತಿ ನೆರೆಹೊರೆಯರ ಕೂಡ ಬಡಿದಾಡುತ್ತಿ ದೊರೆ ಸಿರಿಪುರಂದರವಿಠಲನ ಸ್ಮರಿಸದೆ ದುರಿತಕ್ಕೆ ಗುರಿಯಾಗಿ ನೀ ನಿಲ್ಲುತ್ತಿ ||
Transliteration
Hendati, prana hinduti ||pa|| Dodda konda kotiyante kunikunisutti ||a|| Hottare elutti horage tirugadutti Hottu hoyitu Batya tarennutti Uttama guruhiriyara matu mirutti Mrutyu devateyante maneyolagirutti || Illaddu bedutti sullu matadutti Olle utavanundu kulitirpenenti Ellinashtu kelasa madalarenenti Ellelli taleyettad~hange madutti || Hiritanak~hogutti garuvike madutti Nerehoreyara kuda badidadut…