Haridasa Sahitya — Vyasadasa

Helidhare namma mele yaake

ಹೇಳಿದರೆ ನಮ್ಮ ಮೇಲೆ ಯಾಕಮ್ಮ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥ ಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ|| ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆ ಬಣ್ಣಿಸಿ ಕಸ್ತೂರಿ ತಿಲಕವನಿಟ್ಟು ಚಿಣ್ಣಿಕೋಲು ಚೆಂಡು ಬುಗುರಿ ಕೈಯಲಿಟ್ಟು, ಪೊಸ ಬೆಣ್ಣೆಯ ಮೆಲ್ಲು ಹೋಗೆಂದು ಕಳುಹಿಬಿಟ್ಟು || ಕರೆದು ಕೈಯಲ್ಲಿ ಚಿಟ್ಟೆಬೆಲ್ಲ ಕೊಟ್ಟು, ಚಿಕ್ಕ ಹರಳುಕಲ್ಲುಗಳನ್ನೆ ಅರಿಸಿ ಕೊಟ್ಟು ವಾರಿಗೆಯ ಪುಂಡರನ್ನು ಮಾಡಿಕೊಟ್ಟು, ಗೋಪಿ ಊರನೆಲ್ಲ ಸುಲಿಯೆಂದು ಕಳುಹಿಕೊಟ್ಟು || ಹೋಗೆಂದು ರಂಗನ ಕಳುಹಿಕೊಟ್ಟು, ಗೋಪಿ ಆಗ ಭೋಗಂಗಳೆಲ್ಲ ತುಂಬಿಕೊಟ್ಟು ನಿಗಮಗೋಚರನೆಂಬ ಪೆಸರನಿಟ್ಟು, ಗೋಪಿ ಪುರಂದರವಿಠಲನ್ನ ಬೆಳೆಸಿಬಿಟ್ಟು ||

Transliteration

Helidare namma mele yakamma sittu inthagadigara Magana padeda mele nivishtu ||pa.|| Sanna rumalu katti cunga bittu panege Bannisi kasturi tilakavannittu Cinnikolu chendu bugari kaiyalittu posa Benneya mellu hogendu kaluhibittu ||1|| Karedu kaiyalli citte bella kottu cikka Haralu kallugalanne arisikottu Varigeya pundarannu madikottu gopi Uranella suliyendu kaluhisikottu ||2|| Hogendu rangana kaluhi…