Haridasa Sahitya — Vyasadasa

Helidha yamadharma

ಹೇಳಿದ ಯಮಧರ್ಮ

Composer: Prasanna Venkata Dasaru · Deity: Vishnu · Genre: Philosophy

Kannada lyrics

ಹೇಳಿದ ಯಮಧರ್ಮ ತನ್ನಾಳಿಗೆ ।।ಪ॥ ಹೇಳಿದ ಯಮ ತನ್ನೂಳಿಗದವರಿಗೆ ಖೂಳ ದುರಾತ್ಮರಾಗಿ ಬಾಳುವರನು ತರ ।।೧।। ಹರಿ ಸಂಕೀರ್ತನೆಯ ನರನಾರಿಯರು ಆ- ದರದಲಿ ಮಾಡಿದವರ ನಿಂದಿಪರ ತರ ।।೨।। ಹರಿದಸರಿಗುಣಕರಿಯದೆ ಜನ್ಮಾಂತ ಒರಟು ಮಾತಿನ ಲುಬ್ಧ ನರನಲ್ಲದೇ ತರ ।।೩।। ಹರಿಕಥಾಮೃತ ಉಪಚಾರಕಾಗಿ ಕೇಳುವಾ ಪರನಾರೇರಾಳುವ ದುರುಳನ ಕಟ್ಟಿತರ ।।೪।। ಗುರುಹಿರಿಯರೊಳು ಪ್ರತ್ಯುತ್ತರ ಕೊಡುವರ ಮರುಳಾಗಿ ಮಮತೆಯಾ ಸತಿ ವಶದನ ತರ ।।೫।। ಅಂಬುಜಾಕ್ಷನೆ ಪೂಜೆ ಜಂಭದಿ ಮಾಡುವ ರಂಭೆಯರೊಡನಾಟದ ಡಂಭನ ಹಿಡಿತರ ।।೬।। ಒಳ್ಳೇದು ಹಳಿದು ತಾ ಬಲ್ಲವನೆನುವನ ಚೆಲ್ವಾ ಪ್ರಸನ್ವೆಂಕಟಾ ವಲ್ಲಭಾಗರಿತರ ।।೭।।

Transliteration

Helida yamadharma tannalige ||pa|| Helida yama tannuligadavarige Kula duratmaragi baluvaranu tara ||1|| Hari sankirtaneya naranariyaru A- Daradali madidavara nindipara tara ||2|| Haridasarigunakariyade janmanta Oratu matina lubdha naranallade tara ||3|| Harikathamruta upacarakagi keluva Paranareraluva durulana kattitara ||4|| Guruhiriyarolu pratyuttara koduvara Marulagi mamateya sati vasadana tara…