Haridasa Sahitya — Vyasadasa

Hege maadali magivige

ಹೇಗೆ ಮಾಡಲಿ ಮಗುವಿಗೆ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಹೇಗೆ ಮಾಡಲಿ ಮಗುವಿಗೆ ಏನಾಯಿತೆ , ಇದ- ರಾಗಮವ ಬಲ್ಲವರು ತಿಳಿದು ಪೇಳಿ ||ಪ|| ಕಣ್ಣಮುಚ್ಚಲೊಲ್ಲನು ತೂಗಿ ಮಲಗಿಸಿದರೆ ಬೆನ್ನ ಮೇಲಿನ ಬುಕಟಿ ಕಲ್ಲ ಅರಿಯಾಗಿದೆ || ರೋಗವಿದೇನು ದಾಡೆಯಲಿ ನೀರು ಇಳಿವುತದೆ ಕೂಗುವ ಧ್ವನಿ ಒಮ್ಮೆ ಕುಂದಿದುದು || ಖಂಡ ಸಕ್ಕರೆ ಹಾಲು ಉಣಕೊಟ್ಟರೊಲ್ಲದೆ ಮಣ್ಣು ಹೇಂಟೆ ಬೇಡಿದ ಕೈಯಾಗೆ ಏನು ಕೊಡಲಿ ಮಂಡೆ ಜಡೆಕಟ್ಟಿತಿನ್ನೇನು ಮಾಡಲಿ ಇದಕೆ ಹಿಂಡು ಸತಿಯರ ಸಂಗ ಘನವಾಯಿತು || ಮಾಲೆಯನು ತೆಗೆದು ಮೈಮುರಿದುಟ್ಟು ನಗುತಿದೆ ಕಲಕಿತನದಲ್ಲಿ ಎಮ್ಮ ಕಾಡುತಾನೆ ನೆಲೆಯ ಬಲ್ಲವರು ಕಾಣೆ ಧರೆಯೊಳಗೆ ಚೆಲುವ ಶ್ರೀಪುರಂದರವಿಠಲ ಒಬ್ಬನೇ ಬಲ್ಲ || Hege madali maguvige enayite , ida- Ragamava ballav…

Transliteration

Kannamuccalollanu tugi malagisidare Benna melina bukati kalla ariyagide || Rogavidenu dadeyali niru ilivutade Kuguva dhvani omme kundidudu || Kanda sakkare halu unakottarollade Mannu hente bedida kaiyage Enu kodali Mande jadekattitinnenu madali idake Hindu satiyara sanga ganavayitu || Maleyanu tegedu maimuriduttu nagutide Kalakitanadalli emma kadutane Neleya ballavaru kane dhareyolage Celuva sripu…