Haridasa Sahitya — Vyasadasa

Hege bareditu pracinadalli

ಹೇಗೆ ಬರೆದೀತು ಪ್ರಾಚೀನದಲ್ಲಿ

Composer: Purandara Dasaru · Deity: Hari · Genre: Ugabhoga

Kannada lyrics

ಹೇಗೆ ಬರೆದೀತು ಪ್ರಾಚೀನದಲ್ಲಿ ಹಾಗೆ ಇರಬೇಕು ಸಂಸಾರದಲ್ಲಿ ಪಕ್ಷಿ ಕೂತಿತು ಅಂಗಳದಲ್ಲಿ ಹಾರಿ ಹೋಯಿತು ಆ ಕ್ಷಣದಲ್ಲಿ ಆಡುವ ಮಕ್ಕಳು ಮನೆ ಕಟ್ಟಿದರು ಆಟ ಸಾಕೆಂದು ಮುರಿದೋಡಿದರು ಸಂತೆ ನೆರೆದೀತು ನಾನಾ ಪರಿ ತಿರುಗಿ ಆಯಿತು ತಮ್ಮ ತಮ್ಮ ದಾರಿ ವಸ್ತಿಕಾರನು ವಸ್ತಿಗೆ ಬಂದ ಹೊತ್ತಾರೆ ಎದ್ದು ಊರಿಗೆ ಹೋದ ಈ ಸಂಸಾರಮಾಯ ಬಿಡಿಸಿ ಕಾಯೊ ಪುರಂದರವಿಠಲ ||

Transliteration

Hege bareditu pracinadalli Hage irabeku samsaradalli Pakshi kutitu angaladalli Hari hoyitu A kshanadalli Aduva makkalu mane kattidaru Ata sakendu muridodidaru Sante nereditu nana pari Tirugi Ayitu tamma tamma dari Vastikaranu vastige banda Hottare eddu Urige hoda I samsaramaya bidisi Kayo purandara vittala||