Haridasa Sahitya — Vyasadasa

Hastha mahima suladhi

ಧ್ರುವತಾಳ –

Composer: Vijaya Dasaru · Deity: Hari · Genre: Sulaadi

Kannada lyrics

ಧ್ರುವತಾಳ – ಕಡಗ ಕಂಕಣದಿಂದ ಶೋಭಿತವಾದ ಹಸ್ತಾ ಪೊಡವಿಪತಿ ರಘುನಾಥಗೆ ಎರಗಿ ಮುಗಿದ ಹಸ್ತಾ ಒಡನೆ ಕುರಹುಗೊಂಡು ಸೀತೆಗಿತ್ತ ಹಸ್ತಾ ಗಿಡಗಳು ಮುರಿದು ತರದಂಥದೀ ಹಸ್ತಾ ಘುಡಿಘುಡಿಸುತ ಅಕ್ಷನ ಸದೆಬಡೆದ ಹಸ್ತಾ ಜಡರಾವಣ ಎದೆಯಲ್ಲಿ ಗುದ್ದಿದ ಹಸ್ತಾ ತಡಿಯದೆ ಚೂಡಾಮಣಿಯ ಒಡೆಯಾಗಿತ್ತ ಹಸ್ತಾ ಕಡು ಪರಾಕ್ರಮದ ಹಸ್ತಾ ಕಡಲಾ ಬಂಧಿಸಲು ಗಿರಿಗಳ ತಂದ ಹಸ್ತಾ ಬಿಡದೆ ಪೂಜಿಪರಿಗೆ ಅಭಯಕೊಡುವ ಹಸ್ತಾ ಸಡಗರದ ದೈವ ಸಿರಿ ವಿಜಯ ವಿಠ್ಠಲರಾಯನ ಅಡಿಗಳಲ್ಲಿ ಅನುಗಾಲ ಇಟ್ಟ ಹಸ್ತಾ || ೧ || ಮಟ್ಟತಾಳ – ಗದೆಯಿಂದ ಅರಿಗಳ ಸದೆ ಬಡಿದ ಹಸ್ತಾ ಮುದದಿಂದಲಿ ಅದ್ರಿವೊದಗಿ ತಂದ ಹಸ್ತಾ ಕದನದೊಳಗೆ ಮಾಗಧನ ಸೀಳಿದ ಹಸ್ತಾ ಮದನೃಪನನುಜನ ಉರವ ಬಗೆದ ಹಸ್ತಾ ಸ…

Transliteration

Dhruva tala – Kadaga kankanadinda sobitavada hasta Podavipati ragunathage eragi mugida hasta Odane kurahugondu sitegitta hasta Gidagalu muridu taradanthadi hasta Gudigudisuta akshana sadebadeda hasta Jadaravana edeyalli guddida hasta Tadiyade chudamaniya odeyagitta hasta Kadu parakramada hasta Kadala bamdhisalu girigala tamda hasta Bidade pujiparige abayakoduva hasta Sadagarada daiva siri vijaya v…