Haridasa Sahitya — Vyasadasa

Hariyemba namamrutada

ಹರಿಯೆಂಬ ನಾಮಾಮೃತದ

Composer: Purandara Dasaru · Deity: Hari · Genre: Bhakti

Kannada lyrics

ಹರಿಯೆಂಬ ನಾಮಾಮೃತದ ಸುರುಸಿಯು ಪರಮ ಭಕ್ತರಿಗಲ್ಲದೆ ।।ಪ।। ಅರಿಯದ ಕಡುಮೂರ್ಖ ನೀಚ ಜನರಿಗೆಲ್ಲ ಹರುಷವಾಗಬಲ್ಲದೆ ।।ಅ.ಪ।। ಅಂದಿಗೆ ಅರಳೆಲೆ ಇಟ್ಟರೆ ಕೊಡ ಕಂದನಾಗಬಲ್ಲುದೆ ಹಂದಿಗೆ ಸಕ್ಕರೆ ತುಪ್ಪ ತಿನಿಸಲು ಗಜೇಂದ್ರನಾಗಬಲ್ಲುದೆ ಚಂದಿರನ ಪೂರ್ಣ ಕಳೆಯನು ತೋರಲು ಅಂಧ ನೋಡಬಲ್ಲನೆ ಇಂದಿರೆ ಅರಸನ ನಾಮದ ಮಹಿಮೆಯ ಮಂದಜ್ಞಾನಿ ಬಲ್ಲನೆ ।।೧।। ಉರಗಕ್ಕೆ ಕ್ಷೀರವನೆರೆಯಲು ಅದರ ವಿಷವು ಹೋಗಬಲ್ಲುದೆ ತ್ವರೆಯಿಂದ ನೀಲಿಯ ಕರದಲಿ ತೊಳೆಯಲು ಕರಿದು ಹೋಗಬಲ್ಲುದೆ ಪರಿಪರಿ ಬಂಗಾರವಿಟ್ಟರೆ ದಾಸಿಯು ಅರಸಿಯಾಗಬಲ್ಲಳೆ ಭರದಿಂದ ಶ್ವಾನನ ಬಾಲವ ತಿದ್ದಲು ಸರಳವಾಗಬಲ್ಲುದೆ ।।೨।। ಮೋಡಕೆ ಮಯೂರ ಕುಣಿವಂತೆ ಕುಕ್ಕುಟ ನೋಡಿ ಕುಣಿಯಬಲ್ಲುದೆ ಹಾಡಿ…

Transliteration

Hariyemba namamrutada surusiyu parama Baktarigallade ||pa|| Ariyada kadumurka nica janarigella harushavagaballade ||a.pa|| Andige aralele ittare koda kandanagaballude Handige sakkare tuppa tinisalu gajendranagaballude Candirana purna kaleyanu toralu andha nodaballane Indire arasana namada mahimeya mandaj~jani ballane ||1|| Uragakke kshiravanereyalu adara vishavu hogaballude Tvareyimnda niliya kara…