Haridasa Sahitya — Vyasadasa

Hariyadhika haranadhika endu

ಹರಿಯಧಿಕ ಹರನಧಿಕ ಎಂದು

Composer: Purandara Dasaru · Deity: Hari · Genre: Philosophy

Kannada lyrics

ಹರಿಯಧಿಕ ಹರನಧಿಕ ಎಂದು ಹೋರಾಡದಿರಿ ಹರಿ–ಹರರ ಭಕ್ತರೇ ಸಾಕ್ಷಿ ಲೋಕದೊಳು ||ಪ|| ಹರಿಯೆಂದು ಪ್ರಹ್ಲಾದ ಬಂದ ದುರಿತವ ಗೆಲಿದ ಹರನೆಂದು ಅವನ ಪಿತ ತಾನೆ ಅಳಿದ ಹರಿಯೆಂದು ವಿಭೀಷಣನು ಸ್ಥಿರ–ಪಟ್ಟವೈದಿದ ಹರನೆಂದು ರಾವಣನು ಹತನಾದನಯ್ಯ ||೧|| ಹರಿಯೆಂದು ಭೀಮ ಪರಿಪೂರ್ಣಕಾಮನು ಆದ ಹರನೆಂದ ಆ ಜರಾಸಂಧ ಹತನಾದ ಹರಿಯ ಬಾಗಿಲ ಕಾಯ್ದ ಬಲಿ ಭಾಗ್ಯವಂತನಾದ ಹರನ ಬಾಗಿಲ ಕಾಯ್ದ ಬಾಣನಳಿದ ||೨|| ಹರನ ವರವನು ಪಡೆದ ಭಸ್ಮಾಸುರನು ಅವನ ಶಿರದಲ್ಲಿ ತನ್ನ ಕರವಿಡಲು ಬರಲು ಹರಿ ನೀನೆ ಗತಿಯೆಂದು ತ್ರಿಪುರಾರಿ ಮೊರೆಯಿಡಲು ವರದ ಪುರಂದರ ವಿಠಲ ಕಾಯ್ದ–ದರಿಯ ||೩||

Transliteration

Hariyadhika haranadhika endu horadadiri Hari-harara baktare sakshi lokadolu ||pa|| Hariyendu prahlada banda duritava gelida Haranendu avana pita tane alida Hariyendu vibishananu sthira-pattavaidida Haranendu ravananu hatanadanayya ||1|| Hariyendu bima paripurnakamanu Ada Haranenda A jarasandha hatanada Hariya bagila kayda bali bagyavantanada Harana bagila kayda bananalida ||2|| Harana varavanu pad…