Haridasa Sahitya — Vyasadasa

Hariya pattadha rani

ಹರಿಯ ಪಟ್ಟದ ರಾಣಿ

Composer: Jagannatha Dasaru · Deity: Lakshmi Devi · Genre: Dasara Pada

Kannada lyrics

ಹರಿಯ ಪಟ್ಟದ ರಾಣಿ ವರದೆ ಕಲಾಣೀ ಉರುಗುಣಗಣಶ್ರೇಣಿ ಕರುಣೀ || ಶಿರದಿ ನಿನ್ನಯ ದಿವ್ಯ ಚರÀಣಕಮಲಕೆ ನಾನು ಎರಗಿ ಬಿನೈಪೆ ತಾಯೆ ಸುಖವೀಯೇ || ವನಜಸಂಭವ ಮುಖ್ಯ ಅನಿಮಿಶೇಷರ ಸ್ತೋಮ ದಿನದಿನ ನೀ ಪೊರೆವೇ ಘನಮಹಿಮಳೆ ಮನುಜರಾಧಮನೆಂದು ಮನಸೀಗೆ ನೀ ತಂದು ಕನಕವೃಷ್ಟಿಯ ಸುರಿದು ಪೊರೆಯೇ ಧ್ವರಿಯೇ || ಸೃಷ್ಟಿಕಾರಣಿ ನೀನೆ ಕಷ್ಟ ತರಿದು ಕೃಪಾ – ದೃಷ್ಟಿಯಿಂದಲಿ ನೋಡಿ ಸಲಹೇ ಇಷ್ಟದಾಯಕ ಶಿರಿ ಕೃಷ್ಣನರಸಿಯೆ ನಿನ್ನ ಇಷ್ಟು ವಿಧದಲಿ ಬೇಡಿಕೊಂಬೆ ಅಂಬೆ || ಖ್ಯಾತಮಹಿಮಳೆ ಎನ್ನ ಮಾತು ಲಾಲಿಸು ದೇವಿ ಪೋತ ನಾನಲ್ಲೆ ನಿನಗೆ ದಾತಗುರುಜಗನ್ನಾಥವಿಠಲ ನಿನ್ನ ನಾಥನಾಗಿ ಭಾಗ್ಯಪಡೆದ ಜಸಪಡೆದಾ ||

Transliteration

Hariya pattada rani varade kalyani^^urugunaganasreni karuni Siradi ninnaya divya charanakamalake nanu Eragi binnaipe taye sukaviye || pa || Vanajasambava mukya animiseshara stoma Dinadina ni poreve ganamahimale Manujaradhamanendu manasige ni tandu Kanakavrushtiya suridu poreye dhvariye || 1 || Srushtikarini nine kashta taridu krupadrushti Yindali nodi salahe mate Ishtadayaka siri krushnanarasiye I…