Haridasa Sahitya — Vyasadasa

Hariya maredudakinta papavilla

ಹರಿಯ ಮರೆದುದಕಿಂತ ಪಾಪವಿಲ್ಲ

Composer: Vijaya Dasaru · Deity: Hari · Genre: Bhakti

Kannada lyrics

ಹರಿಯ ಮರೆದುದಕಿಂತ ಪಾಪವಿಲ್ಲ ಹರಿಸ್ಮರಣೆಯಿಂದಧಿಕ ಪುಣ್ಯ ಮತ್ತೊಂದಿಲ್ಲ ।।ಪ॥ ಗೋಹತ್ಯ ಸುರಾಪಾನ ಕನಕತಸ್ಕರ ಸುಜನ- ದ್ರೋಹ ಗುರುತಲ್ಪಗಮನ ಬಲು ಕಪಟ ವ್ಯಸನ ಬಾಹಿರವಾಗ್ ದ್ವೇಷ ಪರದಾರಗಮನ ವಿ- ವಾಹಗಳ ಮಾಣಿಸುವ ಪಾಪಕಿಂತಲು ಮೇಲು ।।೧।। ಗಂಗಾನದಿಯಲ್ಲಿ ಸ್ನಾನ ಪ್ರಣವ ಆಚಮನ ಹಿಂಗದಲೆ ಗಾಯತ್ರಿಮಂತ್ರ ಮೌನ ತುಂಗ ದಾನ ಧರ್ಮ ವೃತ್ತಿಕ್ಷೇತ್ರ ರತುನ ಬಂಗಾರಯಿತ್ತಧಿಕ ಬಹಳ ಪುಣ್ಯ ಮೇಲು ।।೨।। ಹಾಸ್ಯವಿರೋಧ ಮದ ಮತ್ಸರ ಪರಕಾರ್ಯ ದಾಸ್ಯದಲಿ ಕೆಡಿಸುವ ಶಠನ ಲೋಭಿ ವೈಶ್ವದೇವಾಹಿತ ಅತಿಥಿಗಳ ನಿಂದ್ಯ ರ ಹಸ್ಯ ದೂರುವ ಬಲು ಪಾಪಕಿಂತಲು ಮೇಲು ।।೩।। ತೀರ್ಥಯಾತ್ರೆ ವೇದ ಭಾಗವತ ಪುರಾಣ ಸಾರ್ಥಕ್ಯವಾದ ಪ್ರವಚನ ಶಾಸ್ತ್ರ ಪ್ರಾರ್ಥನೆ ಸ…

Transliteration

Hariya maredudakinta papavilla Harismaraneyindadhika punya mattondilla ||pa|| Gohatya surapana kanakataskara sujana- Droha gurutalpagamana balu kapata vyasana Bahiravag dvesha paradaragamana vi- Vahagala manisuva papakintalu melu ||1|| Ganganadiyalli snana pranava Acamana Hingadale gayatrimantra mauna Tunga dana dharma vruttikshetra ratuna Bangarayittadhika bahala punya melu ||2|| Hasyavirodha mad…