Haridasa Sahitya — Vyasadasa

Harivasaradupavasada bagyavu

ಹರಿವಾಸರದುಪವಾಸದ ಭಾಗ್ಯವು

Composer: Purandara Dasaru · Deity: Hari · Genre: Ekadashi

Kannada lyrics

ಹರಿವಾಸರದುಪವಾಸದ ಭಾಗ್ಯವು ಕಂಡ ಕಂಡವರಿಗೆ ದೊರಕುವುದೆ ||ಪ|| ಹಿರಿದು ಜನ್ಮಗಳಿಂದ ಹರಿಯನಾರಾಧಿಪ ಪರಮ ಭಾಗವತಭಕ್ತರಿಗಲ್ಲದೆ ||ಅ|| ಸ್ನಾನ ಸಂಧ್ಯಾನ ಮೊದಲಾದ ಕರ್ಮನ್ಯೂನದ ಪಾಪರಾಶಿ ಹೇನು ಇರುವೆ ನೊಣ ಮೊದಲಾದ ಪ್ರಾಣಿಯ ಹಿಂಸೆಯ ಪಾಪಂಗಳು ಹೀನತ್ವದಿಂದ ತುಚ್ಛರ ಕೈಲಿ ಹಿಡಿದ ದುರ್ದಾನದ ಪಾಪಂಗಳು ಭಾನುಬಿಂಬವ ಕಂಡ ಹಿಮದಂತೆ ತೊಲಗುವ ಆನಂದವ್ರತಕೆ ಸರಿಯೆನ್ನಬಹುದೆ || ಪರಸತಿಯರ ನೋಡಿ ಮನವಿಟ್ಟ ಪಾಪವು ಪರದೂಷಣೆ ಪಾಪವು ಪರಹಿಂಸೆಯ ಮಾಡಿ ಅವರ ವಸ್ತುಗಳನ್ನು ಅಪಹರಿಸಿದ ಪಾಪವು ಪರಮಾತ್ಮನ ಪೊಗಳುವ ನಾಲಿಗೆಯಲ್ಲಿ ನರರ ಪೊಗಳುವ ಪಾಪವು ಹರಿಯ ಮರಿಯ ಕಂಡ ಕರಿಯ ಸಂಘಗಳಂತೆ ದುರಿತ ಕೋಟಿಗಳನ್ನು ಪರಿಹರಿಸುವಂಥ || ಆಡುವ ಅನೃತ ವಾ…

Transliteration

Harivasaradupavasada bagyavu kandakandavarige dorakuvude || pa || Hiridu janmagalinda hariyanaradhipa – parama bagavatabaktarigallade || A || Snana sandhyana modalada karma nyunada paparasi Henu iruve nona modalada pranihimseya papagalu Hinatvadinda tuccara kaili hidida durdanada papangalu Banubimbava kanda himadante tolaguva A nandanandanavratake sariyennabahude || 1|| Parasatiyara nodi manavitta…