Haridasa Sahitya — Vyasadasa

Harisarvottamanembo hiriputraniralagi

ಹರಿಸರ್ವೋತ್ತಮನೆಂಬೊ ಹಿರಿಪುತ್ರನಿರಲಾಗಿ

Composer: Purandara Dasaru · Deity: Hari · Genre: Ugabhoga

Kannada lyrics

ಹರಿಸರ್ವೋತ್ತಮನೆಂಬೊ ಹಿರಿಪುತ್ರನಿರಲಾಗಿ ಈ ನರಪುತ್ರರಿಂದ ಆಹೋದೇನಯ್ಯ ಪದ್ಮನಾಭನೆಂಬೊ ದೊಡ್ಡ ಪುತ್ರನಿರಲಾಗಿ ಈ ದಡ್ಡಪುತ್ರನಿಂದಲಿ ಆಗೊ ಗತಿಯೇನಯ್ಯ ಶ್ರೀಕೇಶವನೆಂಬೊ ಜ್ಯೇಷ್ಠಪುತ್ರನಿರಲಾಗಿ ಈ ನಷ್ಟಪುತ್ರರಿಂದಲಾಗೋ ಗತಿಯೇನಯ್ಯ ಪುರಂದರವಿಠಲನೆಂಬೊ ಪುಣ್ಯಪುತ್ರನಿರಲಾಗಿ ಅನ್ಯಪುತ್ರರಿಂದಲಿ ಆಗೊ ಗತಿಯೇನಯ್ಯ ||

Transliteration

Harisarvottamanembo hiriputraniralagi I naraputrarinda ahodenayya Padmanabanembo dodda putraniralagi I daddaputranindali Ago gatiyenayya Srikesavanembo jyeshthaputraniralagi I nashtaputrarindalago gatiyenayya Purandaravithalanembo punyaputraniralagi Anyaputrarindali Ago gatiyenayya ||