Haridasa Sahitya — Vyasadasa

Haridinadali unda nararige

ಹರಿದಿನದಲಿ ಉಂಡ ನರರಿಗೆ

Composer: Purandara Dasaru · Deity: Hari · Genre: Ekadashi

Kannada lyrics

ಹರಿದಿನದಲಿ ಉಂಡ ನರರಿಗೆ -ಘೋರ |ನರಕ ತಪ್ಪದು ಎಂದುಶ್ರುತಿಸಾರುತಲಿದೆ|| ಗೋವ ಕೊಂದ ಪಾಪ, ಸಾವಿರ ವಿಪ್ರರ |ಜೀವಹತ್ಯದ ಮಾಡಿದ ಪಾಪವು || ಭಾವಜನಯ್ಯನ ದಿನದಲುಂಡವರಿಗೆ |ಕೀವಿನೊಳಗೆ ಹಾಕಿ ಕುದಿಸುವ ಯಮನು ||1|| ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿಗಳು |ಅಂದಿನ ಅನ್ನವು ನಾಯ ಮಾಂಸ || ಮಂದರಧರನ ದಿನದಲುಂಡವರನು |ಹಂದಿಯ ಸುಡುವಂತೆ ಸುಡುವನು ಯಮನು||2|| ಅನ್ನ -ಉದಕ ತಾಂಬೂಲ – ದರ್ಪಣಗಳು |ಚೆನ್ನವಸ್ತ್ರಗಳೆಲ್ಲ ವರ್ಜಿತವು || ತನ್ನ ಸತಿಯ ಸಂಗ ಮಾಡುವ ಮನುಜನ |ಬೆನ್ನಲಿ ಕರುಳ ಉಚ್ಚಿಸುವನು ಯಮನು||3|| ಜಾವದಜಾಗರಕ್ರತು ನಾಲ್ಕು ಸಾವಿರ |ಜಾವ ನಾಲ್ಕರ ಫಲಕೆ ಮಿತಿಯಿಲ್ಲವು || ದೇವದೇವನ ದಿನದಿ ನಿದ್ರೆಗೈದರೆ ಹುರಿ – |…

Transliteration

Haridinadali unda nararige gora naraka tappadendu shruti saarutalide | pa | govu konda paapa viprara saavira | jivahatyava maadida paapavu | bhaavajanayyana dinadi undaravanu | kivinolage haaki kudisuva yamanu || 1 || ondondu agulige koti koti krimigalu | andina annavu naayi maamsavu | mandaroddhaarana dinadi undavarannu | handiya suduvante sudisuva yamanu || 2 || anna paana taambula darpanagalu |…