Haridasa Sahitya — Vyasadasa
Haridina intha haridina
ಹರಿದಿನ ಇಂಥ ಹರಿದಿನ
Composer: Prasanna Venkata Dasaru · Deity: Vishnu · Genre: Ekadashi
Kannada lyrics
ಹರಿದಿನ ಇಂಥ ಹರಿದಿನ ಪ. ಹರಿದಿನದ ಮಹಿಮೆ ಹೊಗಳಲಗಾಧ|| ಪರಮ ಭಾಗವತರಾಚರಣೆಗಾಹ್ಲಾದÀ ದುರಿತ ದುಷ್ಕøತ ಪರ್ವತಕೆ ವಜ್ರವಾದ ಮರುತ ಸದ್ವ್ವ್ರತಕೆಲ್ಲ ಶಿರೋರತ್ನವಾದ||a.pa|| ಭಕ್ತಿಗೆ ಮೊದಲು ವಿರಕ್ತಿ ಬೀಜವೆಂಬ ಸಕಲ ತಪದೊಳೆಲ್ಲ ಮೇಲೆನಿಸಿಕೊಂಬ ಮಖಕೋಟಿಗಧಿಕ ಫಲಸ್ಥಿರ ಸ್ತಂಭ ಮುಕ್ತಿ ಸೋಪಾನ ನಿಧಾನತ್ವವೆಂಬ ||1|| ತ್ವಕ್ ಚರ್ಮ ಅಸ್ತಿ ಮಜ್ಜ ಮಾಂಸ ರುಧಿರ ಯುಕ್ತ ಸಪ್ತ ಧಾತುಗಳಿಹ ಶರೀರ ನಖ ಕೇಶ ಕಫ ಸ್ವೇದ ಮಲ ಮೂತ್ರಾಗರ ಈ ನಿಖಿಳ ಪಾವನ ಮಾಡುವ ನಿರಾಹಾರ ||2|| ವರ ವಿಪ್ರ ಕ್ಷತ್ರಿಯ ವೈಶ್ಯ ಶೂದ್ರ ಜನರು ತರಳ ಯೌವನ ವೃದ್ಧ ನಾರಿಯರು ಕಿರಾತ ಪುಲತ್ಸ್ಯಾಂದ್ರ ಹೂಣ ಜಾತಿಯವರು ಹರಿವ್ರತ ಮಾತ್ರದಿ ಮುಕ್ತಿಯೈದುವರು ||3||…
Transliteration
Haridina intha haridina – Haridinada mahime hogalalagadha || pa || Parama bagavatara caranegahlada Duritadushkutake vajranada Marutasadvratakella siroratnavada Haridina intha haridina || a || Bakutige modalu virakuti bijavemba Sakala tapadolella melenisikomba Makakotigadhika Pala sthirastamba Mukuti sopana nidanatvademba || 1 || Tvak Sarma asthi majja mamsarudhira Yukutasaputadhatugaliha sarira Na…