Haridasa Sahitya — Vyasadasa
Haridasa lakshana suladi
ಹರಿದಾಸ ಲಕ್ಷಣ ಸುಳಾದಿ
Composer: Vijaya Dasaru · Deity: Hari · Genre: Sulaadi
Kannada lyrics
ಹರಿದಾಸ ಲಕ್ಷಣ ಸುಳಾದಿ ಧ್ರುವತಾಳ ಹರಿದಾಸರ ಲಕ್ಷಣ ಇರಬೇಕು ಈ ಪರಿ ಗರುವ ಕೋಪ ಮದ ಮತ್ಸರಾದಿ ಬಿಡಬೇಕು ಮರುತ ಮತಕೆ ಎಲ್ಲಿ ಸರಿಗಾಣೆನೆನುತಲಿ ಧರಿಯೋಳು ಕೂಗಿ ಡಂಗುರವ ಹೊಯಲಿಬೇಕು ಎರಡಾರು ಪುಂಢ್ರವ ವಿರಚಿಸಿ ಪಂಚಮುದ್ರಾ ಧರರಾಗಿ ತಪ್ತಾಂಕಿತ ಧರಿಸಬೇಕು ಭುಜದಲ್ಲಿ ಶಿರಿಬೊಮ್ಮ ಹರಾದ್ಯರಿಗೆ ತಾರತಮ್ಯಭಾವದಿಂದ ಎರಗಿ ಎನ್ನೊಳಗಿದ್ದು ಪೊರೆಯೆಂದಾಡಲಿಬೇಕು ಕರಣ ನಯನ ಶ್ರವಣನಾಸಾವದನ ಪರಿಪರಿ ಅಂಗಗಳು ಹರಿವಿತ್ತವೆನ್ನಬೇಕು ಗುರುಹಿರಿಯರಿಗೆ ಆದರಪೂರ್ವಕದಿಂದ ಕರಮುಗಿದು ನಮಸ್ಕರಿಸಿ ನುತಿಸಬೇಕು ನೆರೆಹೊರೆಯವರಿಗೆ ನಿರುತ ಇದ್ದರು ಬೇ ಸರಗೊಳಿಸದೆ ಸಂಚರಿಸುತ್ತಲಿರಬೇಕು ಹಣ ಹರಿಯಾಧೀನ, ನೆರೆದ ಸತಿಸುತರು ನಿರುತ ಹರಿಗೆ ದಾಸರು…
Transliteration
Dhruva tala Haridasara lakshana irabeku I pari Garuva kopa mada matsaradi bidabeku Maruta matake elli sariganenenutali Dhariyolu kugi Dangurava hoyalibeku Eradaru pumdhrava viracisi panchamudra Dhararagi taptankita dharisabeku Bujadalli Siribomma haradyarige taratamyabavadinda Eragi ennolagiddu poreyendadalibeku Karana nayana sravananasavadana Paripari angagalu harivittavennabeku Guruhiriyarige ad…