Haridasa Sahitya — Vyasadasa
Hari smarane mado nirantara
ಹರಿ ಸ್ಮರಣೆ ಮಾಡೋ ನಿರಂತರ
Composer: Purandara Dasaru · Deity: Vishnu · Genre: Bhakti
Kannada lyrics
ಹರಿಸ್ಮರಣೆ ಮಾಡೋ ನಿರಂತರ ||ಪ|| ಪರಗತಿಗೆ ಇದು ನಿರ್ಧಾರ ||ಅ|| ದುರಿತ ಗಜಕ್ಕೆ ಕಂಠೀರವನೆನಿಸಿದ ಶರಣಾಗತರಕ್ಷಕ ಪಾವನ ನೀ || ಸ್ಮರಣೆಗೈದ ಪ್ರಹ್ಲಾದನ ರಕ್ಷಿಸಿದ ದುರುಳ ಹಿರಣ್ಯಕನುದರವ ಸೀಳಿದ || ತರುಣಿ ದ್ರೌಪದಿ ಮೊರೆಯಿಡಲಾಕ್ಷಣ ಭರದಿಂದಕ್ಷಯವಿತ್ತ ಮಹಾತ್ಮನ || ಅಂದು ಅಜಾಮಿಳ ಕಂದನ ಕರೆಯಲು ಬಂದು ಸಲಹಿ ಆನಂದವ ತೋರಿದ || ಶ್ರೀಶ ಪುರಂದರವಿಟ್ಠಲರಾಯನ ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ ||
Transliteration
Hari smarane mado nirantara paragatige idu nirdara Durita gajakke kanthiravanenisida sharanagata raksaka pavana ni|1| Smaranegaida prahladana raksisida durula hiranyakanudarava silida|2| Taruni draupadi moreyidalaksana bharadinda ksayavitta mahatmana|3| Andu ajamila kandana kareyalu bandu salahi anandava torida|4| shrisha purandara vittala rayana srstigodeyana mutti bhajisi ni|5|