Haridasa Sahitya — Vyasadasa
Hari ninolivante madu
ಹರಿ ನೀನೊಲಿವಂತೆ ಮಾಡು
Composer: Purandara Dasaru · Deity: Hari · Genre: Ugabhoga
Kannada lyrics
ಹರಿ ನೀನೊಲಿವಂತೆ ಮಾಡು ಒಲಿದರೆ ತಿರಿವಂತೆ ಮಾಡು ತಿರಿದರೆ ದಾರು ನೀಡದಂತೆ ಮಾಡು ದಾರು ನೀಡಿದರೆ ಪೊಟ್ಟೆ ತುಂಬದಂತೆ ಮಾಡು ಪೊಟ್ಟೆ ತುಂಬಿದರೆ ಬಟ್ಟೆ ದೊರೆಯದಂತೆ ಮಾಡು ಬಟ್ಟೆ ದೊರೆತರೆ ಇಂಬು ದೊರೆಯದಂತೆ ಮಾಡು ಇಂಬು ದೊರೆಯದಿದ್ದರೆ ರಂಗ ನಿನ್ನ ಪಾದಾರವಿಂದದಲ್ಲಿ ಇಂಬಿಟ್ಟು ಸಲಹೊ ಪುರಂದರ ವಿಠಲ
Transliteration
Hari ninolivante madu Olidare tirivante madu Tiridare daru nidadante madu Daru nididare potte tumbadante madu Potte tumbidare batte doreyadante madu Batte doretare imbu doreyadante madu Imbu doreyadiddare ranga ninna padaravindadalli Imbittu salaho purandara vithala