Haridasa Sahitya — Vyasadasa

Hari hararu samarendu ariyada

ಹರಿ ಹರರು ಸಮರೆಂದು ಅರಿಯದಜ್ಞಾನಿಗಳು

Composer: Purandara Dasaru · Deity: Hari · Genre: Philosophy

Kannada lyrics

ಹರಿ ಹರರು ಸಮರೆಂದು ಅರಿಯದಜ್ಞಾನಿಗಳು ಹರನ ಹೃದಯದೊಳಿರುವ ಹರಿಯ ತಾವರಿಯರು ||ಪ|| ಶರಧಿ ಮಥನದೊಳಂದು ಸಿಂಧುಸುತೆ ಬಂದಾಗ ಹರಿ ಹರ ವಿರಿಂಚಿ ಮೊದಲಾದ ಸುರರ ವರರಾರೆಂದು ನೋಡಿ ಶಂಕೆಯ ಬಿಟ್ಟು ಸಿರಿದೇವಿ ಹರಿ ಸರ್ವವರನೆಂದು ಮಾಲೆ ಹಾಕಿದಳು || ಹರಿನಾಮ ಕ್ಷೀರವನು ಹರನಾಮ ನೀರನು ಕ್ಷೀರ ನೀರೊಂದಾದುದಂತೆ ಇಹದು ಪರರು ಪರ ತತ್ವವರಿಯದ ನರ ತಾನು ಹರಿಹರರು ಸರಿಯೆಂದು ನರಕಕ್ಕೆ ಒಳಗಾಗುತಿಹನು || ಕ್ಷೋಣಿಯೊಳು ಬಾಣನಾ ತೋಳುಗಳ ಕಡಿವಾಗ ಏಣಾಂಕಧರ ಬಾಗಿಲೊಳಗೆ ಇರಲು ಕಾಣಿಪರೆ ಜನರೆಲ್ಲ ಹರಿಪರನು ತಾನೆಂದು ಗುಣಪೂರ್ಣ ಪುರಂದರ ವಿಟ್ಠಲನು ಪರನು || Hari hararu samarendu ariyadaj~janigalu Harana hrudayadoliruva hari…

Transliteration

Saradhi mathanadolandu sindhusute bandaga Hari hara virinci modalada surara Varararendu nodi Sankeya bittu siridevi Hari sarvavaranendu male hakidalu || Harinama kshiravanu haranama niranu Kshira nirondadudante ihadu pararu Para tatvavariyada nara tanu harihararu Sariyendu narakakke olagagutihanu || Kshoniyolu banana tolugala kadivaga Enankadhara bagilolage iralu Kanipare janarella hariparanu tane…