Haridasa Sahitya — Vyasadasa
Hari hararu hege samaru
ಹರಿ ಹರರು ಹೇಗೆ ಸಮರು
Composer: Purandara Dasaru · Deity: Hari · Genre: Philosophy
Kannada lyrics
ಹರಿ ಹರರು ಹೇಗೆ ಸಮರು ಹರಿಹರ ಭಕ್ತರೆ ಇದಕೆ ಸಾಕ್ಷಿ ||ಪ|| ಹರಿಯ ಮಂದಿರ ವೈಕುಂಠಸ್ಥಾನ ಹರನ ಮಂದಿರ ಶ್ಮಶಾನ ಹರಿಯ ಪಟ್ಟದ ರಾಣಿ ಸಿರಿದೇವಿ ಎಂಬರು ಹರನ ಪಟ್ಟದ ರಾಣಿ ಗಿರಿಜೆ ಎಂಬರು || ಹರಿಯು ಉಡುವೋದು ಪೀತಾಂಬರ ಹರನುಡುವೋದು ಚರ್ಮಾಂಬರ ಹರಿಯು ಪೂಸುವುದು ಶ್ರೀಗಂಧ ಕಸ್ತೂರಿ ಹರನು ಪೂಸುವುದು ಶ್ಮಶಾನದ ಬೂದಿ || ಹರಿಯ ಕೊರಳೊಳು ಕೌಸ್ತುಭರನ್ನ ಹರನ ಕೊರಳೊಳು ಗರಳದ ಚಿಹ್ನ ಹರಿಯ ಆಯುಧವು ವರಶಂಖಚಕ್ರ ಹರನ ಆಯುಧವು ತ್ರಿಶೂಲ ಡಮರು || ಹರಿಯ ಪರಿವಾರ ಬ್ರಹ್ಮಾದಿ ಸುರರು ಹರನ ಪರಿವಾರ ಹೆಣನ ತಿಂಬುವರು ಹರಿಹರಿ ಎಂಬೋರು ಸಿರಿವಂತರಾಗುವರು ಹರಹರ ಎಂಬೋರು ಹತರಾಗುವರು || ಹರಿಗೆ ವಾಹನನಾದ ಖಗರಾಜನು ಹರಗೆ ವಾಹನ ಗೋರಾಜನು ಪ…
Transliteration
Hari hararu hege samaru Harihara Baktare idake sakshi ||pa|| Hariya mandira vaikunthasthana Harana mandira smasana Hariya pattada rani siridevi embaru Harana pattada rani girije embaru || Hariyu uduvodu pitambara Haranuduvodu carmambara Hariyu pusuvudu srigandha kasturi Haranu pusuvudu smasanada budi || Hariya koralolu kaustubaranna Harana koralolu garalada cihna Hariya Ayudhavu varasankacakra Har…