Haridasa Sahitya — Vyasadasa

Hari dina pataka parihara

ಹರಿದಿನ ಪಾತಕ ಪರಿಹಾರ ದನುಜರ

Composer: Haridasa · Deity: Vishnu · Genre: Ekadashi

Kannada lyrics

ಹರಿದಿನ ಪಾತಕ ಪರಿಹಾರ ದನುಜರ ಕರುಣಕ್ಕೆ ಕಾರಣ ನಂಬೆಲೊ ಮನುಜ ||pa|| ಗಂಗೆ ಮೊದಲಾದ ತೀರ್ಥಂಗಳೆಣೆಯ ಶ್ರೀ-ರಂಗ ಮೊದಲಾದ ಕ್ಷೇತ್ರವು ಸರಿಯೆ ಉ-ತ್ತುಂಗ ಜಪತಪÀ ಹೋಮಂಗಳೆದುರೆ ಶ್ರೀ-ರಂಗನಾಥನ ದಿನದೊಂದುಪವಾಸಕೆ ||1|| ಹಿಂದೆ ಮಾಡಿದ ಪಾಪ ಪರಿಹಾರವು ನೀ-ನಿಂದು ಮಾಡುವ ಸುಕೃತ ಬೆಳಸು ಮುಂದಣ ಮುಕುತಿಗೆ ಕಲ್ಪ ಲತಾಂಕುರಇಂದಿರೇಶನ ದಿನದೊಂದುಪವಾಸಕೆ ||2|| ರುಕುಮಾಂಗದ ಮೊದಲಾದ ಭಕುತರೆಲ್ಲಸಕಲವ ಬಿಟ್ಟು ಏಕಾದಶಿ ವ್ರತವ ಭಕುತಿಯಿಂ ಕೂಡಿ ಶ್ರೀಕೃಷ್ಣನ ಮೆಚ್ಚಿಸಿಮುಕುತಿ ಸೂರೆಯಗೊಂಡರೆಂಬುದನರಿಯ ||3||

Transliteration

Haridina patakaparihara divijara Karunakke karana nambelo manuja | pa | Gange modalada tirthangaleneye Sriranga modalada kshetravu sariye Uttunga japatapa homagaledure Sriranganathana dinakondupavasake | 1 | Hinde madida papa pariharavu, Ninindu maduva sukruta belesu Mundana mukutige kalpalatankura Indiresana dinadondupavasake | 2 | Rukumangada modalada Bakutare Sakalava bittu ekadasivratav Bakuti…