Haridasa Sahitya — Vyasadasa
Hare venkata shaila
ಹರೇ ವೆಂಕಟಶೈಲ ವಲ್ಲಭ
Composer: Sripadarajaru · Deity: Srinivasa / Venkatesha · Genre: Dasara Pada
Kannada lyrics
ಹರೇ ವೆಂಕಟಶೈಲ ವಲ್ಲಭ ಪೊರೆಯಬೇಕು ಎನ್ನ ||ಪ|| ದುರಿತದೂರ ನೀನಲ್ಲದೆ ಧರೆಯೊಳು ಪೊರೆವರ ನಾ ಕಾಣೆ ನಿನ್ನಾಣೆ ||ಅ.ಪ|| ಆರು ನಿನ್ನ ಹೊರತೆನ್ನ ಪೊರೆವರು ನೀರಜಾಕ್ಷ ಹರಿಯೆ ಅ- ಪಾರಮಹಿಮ ಪುರಾಣಪುರುಷ ಘೋರ ದುರಿತಗಳ ದೂರ ಮಾಡಿಸೋ ||೧|| ಇಂದಿರೇಶ ಅರವಿಂದನಯನ ಎನ್ನ ತಂದೆ ತಾಯಿ ನೀನೆ ಹೊಂದಿದವರ ಅಘವೃಂದ ಕಳೆವ ಮಂದರಾದ್ರಿಧರನೇ ಶ್ರೀಧರನೆ ||೨|| ಮಂಗಳಾಂಗ ಮಹನೀಯ ಗುಣಾರ್ಣವ ಗಂಗೋದಿತ ಪಾದ ಅಂಗಜಪಿತ ಅಹಿರಾಜಶಯ್ಯ ಶ್ರೀ ರಂಗವಿಠಲ ದೊರೆಯೇ ಶ್ರೀ ಹರಿಯೇ ||೩||
Transliteration
Hare venkata shaila vallabha paaliso nee enna || pa || Durita doora neenallade dhareyolu | porevara naa kaane, ninnaane || a. Pa. || Indiresha aravinda nayana enna | tande taayi neene | ponmdidavara&gha vrunda kaleva | shree mandaraadri dharane shreedharane || 1 || Aaru ninna horatennanu kaayvaru neerajaaksha hariye | ghora duritagala doora maadisuva | apaara mahima doreye shree hariye || 2 || Man…