Haridasa Sahitya — Vyasadasa
Hara hara purahara girijamanohara
ಹರ ಹರ ಪುರಹರ ಗಿರಿಜಾಮನೊಹರ
Composer: Prasanna Venkata Dasaru · Deity: Shiva / Rudra Devaru · Genre: Dasara Pada
Kannada lyrics
ಹರ ಹರ ಪುರಹರ ಗಿರಿಜಾಮನೊಹರ ಸುರವರ ಕರುಣಾಕರನೆ ನಮೋ ನಮೋ ||ಪ|| ಶರಣರ ಸುರತರು ವರಪಂಪಾಪತಿ ವಿರೂಪಾಂಬಕ ಪೊರೆ ಶುಭದಿ ||ಅಪ|| ಮದನನ ಮಥನ ಪಂಚವದನ ಕೈಲಾಸದ ಸದನ ಸದಾಶಿವ ನಮೋ ನಮೋ ಹದಿನಾಲ್ಕು ಭುವನದ ಬಲ್ಲರಜಿತ ಕದನ ಕಲುಷಹರ ನಮೋ ನಮೋ ||೧|| ತಾರಕಪತಿಧರ ಭೂರಿಕೃಪಾಂಬಿಧಿ ತಾರಕಹರ ಪಿತ ಜಯಾ ಜಯಾ ತಾರಕ ಉಪದೇಶ ಕಾರಕ ಘನಭವ ತಾರಕ ಮೃಂತ್ಯುಂಜಯಾ ಜಯಾ ||೨|| ಶೇಷಾಭರಣವಿ ಭೂಷಾಭವ ವಿ ಶೇಷ ಭಕುತಪ್ರಿಯ ವಿಭೋ ವಿಭೋ ಶೇಷಭೂಭೃತ್ ಪೊಷ ಪ್ರಸನ್ವೆಂಕ ಟೇಶ ಭಜನಶೀಲ ವಿಭೋ ವಿಭೋ ||೩||
Transliteration
hara hara purahara girijAmanohara suravara karuNAkarane namO namO ||pa|| SaraNara surataru varapaMpApati virUpAMbaka pore SuBadi ||apa|| madanana mathana pancavadana kailAsada sadana sadASiva namO namO hadinAlku Buvanada ballarajita kadana kaluShahara namO namO ||1|| tArakapatidhara BUrikRupAMbidhi tArakahara pita jayA jayA tAraka upadESa kAraka GanaBava tAraka mRuntyunjayA jayA ||2|| SEShABaraNav…