Haridasa Sahitya — Vyasadasa

Hanumanta paahi hanumanta

ಹನುಮಂತ ಪಾಹಿ ಹನುಮಂತ

Composer: Haridasa · Deity: Mukhyaprana / Vaayu / Hanuma / Bheema · Genre: Dasara Pada

Kannada lyrics

ಹನುಮಂತ ಪಾಹಿ ಹನುಮಂತ । ಮುನಿವ್ಯಾಸ ಕರಕಮಲಾರ್ಚಿತ ಜಯವಂತ ।। pa। । ಭೂಲೋಲ ಕೋಲಜಕೂಲ ಸುಮಂದಿರ । ಫಾಲಾಕ್ಷ ಪೌಲೋಮಿಪತಿ ವಂದಿತ । ಕಾಲಕಾಲದಿ ನಿನ್ನ ಓಲೈಸುವರ ಸಂಗ । ಪಾಲಿಸು ಕರುಣದಿ ಕಾಳೀ ಮನೋಹರ ।। 1 ।। ಬಾಣ ರೂಪನೆ ಪಂಚಬಾಣ ನಿರ್ಜಿತನೆ । ಷ । ಟ್ಕೋಣ ಮಧ್ಯದಿ ಬಂದು ನೀ ನೆಲೆಸಿ । ಕ್ಷೋಣೀಗೀರ್ವಾಣ ಸುಶ್ರೇಣಿಯಿಂದರ್ಚನೆ । ಮಾಣದೆ ಕೈಕೊಂಬ ವಾಣೀಶ ಸ್ಥಾನಾರ್ಹ ।। 2।। ಸಿಂಧು ಬಂಧನ ಶ್ಯಾಮಸುಂದರವಿಠ್ಠಲನ । ದ್ವಂದ್ವ ಪಾದಾರವಿಂದಕೆ ಮಧುಪ । ನೆಂದೆನಿಸಿದ ಗುರು ಗಂಧವಾಹನ । ನಿನ । ಗೊಂದಿಸುವೆನು ಭಾವಬಂಧ ಬಿಡಿಸಿ ಕಾಯೋ ।। 3 ।।

Transliteration

Hanumanta pahi hanumanta | Munivyasa karakamalarcita jayavanta || Pa || Bulola kolajakula sumandira | Palaksha paulomipati vandita | Kalakaladi ninna Olaisuvara sanga | Palisu karunadi kali manohara || 1 || Bana rupane panchabana nirjitane | Sha | Tkona madhyadi bamdu ni nelesi | Kshonigirvana susreniyindarcane | Manade kaikomba vanisa sthanarha || 2 || Sindhu bandhana syamasundaraviththalana | Dv…