Haridasa Sahitya — Vyasadasa

Hanuma namma thayi thande

ಹನುಮ ನಮ್ಮ ತಾಯಿತಂದೆ

Composer: Purandara Dasaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಹನುಮ ನಮ್ಮ ತಾಯಿತಂದೆ ಭೀಮ ನಮ್ಮ ಬಂಧು ಬಳಗ ಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ ||ಪ|| ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ ಆಯಾಸವಿಲ್ಲದೆ ಸಂಜೀವನವ ತಂದೆ ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ ರಘು ರಾಯನಂಘ್ರಿಗಳೆ ಸಾಕ್ಷಿ ತ್ರೇತಾ ಯುಗದಿ || ಬಂಧುಬಳಗದಂತೆ ಆಪದ್ಬಾಂಧವನಾಗಿ ಪಾರ್ಥನಿಗೆ ಬಂದ ದುರಿತಗಳ ಪರಿಹರಿಸಿ ಅಂಧಕ ಜಾತರ ಕೊಂದು ನಂದ ಕಂದಾರ್ಪಣೆಂದ ಗೋ- ವಿಂದನಂಘ್ರಿಗಳೆ ಸಾಕ್ಶಿ ದ್ವಾಪರ ಯುಗದಿ || ಗತಿ ಗೋತ್ರರಂತೆ ಸಾಧುಯತಿಗಳಿಗೆ ಮತಿಯ ತೋರಿ ಮತಿ ಕೆಟ್ಟ ಇಪ್ಪತ್ತಒಂದು ಮತವ ಖಂಡಿಸಿ ಗತಿಗೆಟ್ಟ ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮ ಗತಿ ಪುರಂದರ ವಿಠಲನೆ ಸಾಕ್ಷಿ ಕಲಿಯುಗದಲ್ಲಿ ||

Transliteration

Hanuma namma thayi thande bheema namma bhandu bhalaga Ananda thirthare namma gathigothravayya|| Thayithande hasulegagi sahayamadi sakuvanthe ayasavillade sanjivanava thande ghayagonda kapigalanu sayadanthe poreda raghu rayanangrigale sakshi threetayugadi||1|| Bandhubalagadanthe aapadbandhavanagi parthanige bahdha bandha durithagala pariharisi andhakajhathara kondu nadakandarpanendu govindanangriga…