Haridasa Sahitya — Vyasadasa

Hanuma namma kamadenu

ಹನುಮ ನಮ್ಮ ಕಾಮಧೇನು

Composer: Prasanna Venkata Dasaru · Deity: Mukhyaprana / Vaayu / Hanuma / Bheema · Genre: Dasara Pada

Kannada lyrics

ಹನುಮ ನಮ್ಮ ಕಾಮಧೇನು ಭೀಮ ನಮ್ಮ ಕಲ್ಪವೃಕ್ಷ ಆನಂದ ತೀರ್ಥಗುರು ಚಿಂತಾಮಣಿ ||ಪ|| ಸೂತ್ರರಾಮಾಯಣ ಮಹಾವ್ಯಾಕರ್ಣ ಪಂಚ ರಾತ್ರ ಭಾರತಪುರಾಣ ಶ್ರುತ್ಯರ್ಥ ಸುಧಾರಸವಾ ವೇತ್ತೃಜನಕಾ ಸಂತತ ಕಿಂಪುರುಷ ವರುಷದಿ ಉಣ ಲಿತ್ತನಾ ಸುಸ್ವರದಿ ಶ್ರೀರಾಮಪ್ರಿಯನು ||೧|| ರಾಜಸೂಯ ಮೂಲದಿಂದ ಶಾಖೊಪಶಾಖ ಸಧರ್ಮ ಸೋಜಿಗದ ಕರ್ಮಕುಸುಮ ಬ್ರಹ್ಮತ್ವಛಲದಿ ರಾಜಿಸುತ್ತ ಸಹಸ್ರಾಕ್ಷ ಸಖಮುಖ್ಯದ್ವಿಜರ್ಗೆ ಸುಖ ಬೀಜ ನಿಂತು ಹೊರೆದನು ಶ್ರೀಕೃಷ್ಣ ಪ್ರೀಯನು ||೨|| ಹಂತ ಭಾಷ್ಯಧ್ವಾಂತದಿ ವೇದಾಂತವಡೆಗೆ ಪೋಕ ಮಣಿ ಮಂತನ ಮುರಿದನು ಮೂವತ್ತೆರಡು ಲಕ್ಷಣದಿ ಕಾಂತಿಯಿಂದ ಪ್ರಸನ್ನವೆಂಕಟ ಕಾಂತನ್ನ ಪ್ರಕಾಶಿಸಿದ ಚಿಂತಾರ್ಥ ನಮಗೀವ ಶ್ರೀ ವ್ಯಾಸಪ್ರೀಯನು ವೇದವ್ಯಾ…

Transliteration

hanuma namma kAmadhEnu BIma namma kalpavRukSha AnaMda tIrthaguru cintAmaNi ||pa|| sUtrarAmAyaNa mahAvyAkarNa paMca rAtra BAratapurANa Srutyartha sudhArasavA vEttRujanakA santata kiMpuruSha varuShadi uNa littanA susvaradi SrIrAmapriyanu ||1|| rAjasUya mUladinda SAKopaSAKa sadharma sOjigada karmakusuma brahmatvaCaladi rAjisutta sahasrAkSha saKamuKyadvijarge suKa bIja niMtu horedanu SrIkRuShNa prIyan…