Haridasa Sahitya — Vyasadasa
Hannu kombuva banniri haridasaru
ಹಣ್ಣು ಕೊಂಬುವ ಬನ್ನಿರಿ ಹರಿದಾಸರು
Composer: Kanakadasaru · Deity: Hari · Genre: Bhakti
Kannada lyrics
ಹಣ್ಣು ಕೊಂಬುವ ಬನ್ನಿರಿ ಹರಿದಾಸರು ಹಣ್ಣು ಕೊಂಬುವ ಬನ್ನಿರಿ ।।ಪ।। ಚೆನ್ನ ಬಾಲಕೃಷ್ಣನೆಂಬ ಕನ್ನೆಗೊನೆಬಾಳೆಹಣ್ಣು ।।ಅ.ಪ।। ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು ಭಕ್ತರ ಬಾಯೊಳು ನೆನೆವ ಹಣ್ಣು ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ ನಿತ್ಯ ಮಾಧವನೆಂಬ ಅಚ್ಚಮಾವಿನ ಹಣ್ಣು ।।೧।। ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು ನಿಜಮುನಿಗಳಿಗೆ ತೋರಿಸಿದ ಹಣ್ಣು ತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣು ಸುಜನಭಕ್ತರೆಲ್ಲ ಕೊಳ್ಳಬನ್ನಿರಿ ಹಣ್ಣು ।।೨।। ತುರುವ ಕಾಯ್ದ ಹಣ್ಣು ತುರಗನ ತುಳಿದಾ ಹಣ್ಣು ಕರೆದರೆ ಕಂಬದೊಳು ಓಯೆಂಬ ಹಣ್ಣು ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು ಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು ।।೩।।
Transliteration
Hannu kombuva banniri haridasaru Hannu kombuva banniri ||pa|| Chenna balakrushnanemba Kannegonebalehannu ||a.pa|| Suttelu lokadi suraru bittida hannu Baktara bayolu neneva hannu Artiyullavarella kolli bekadare Nitya madhavanemba accamavina hannu ||1|| Ajana padeda hannu gajava kayda hannu Nijamunigalige torisida hannu Trijagavandita palgadalodeyane hannu Sujanabaktarella kollabanniri hannu ||2|| T…