Haridasa Sahitya — Vyasadasa

Hannu bandide kolliri niviga

ಹಣ್ಣು ಬಂದಿದೆ ಕೊಳ್ಳಿರಿ ನೀವೀಗ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಹಣ್ಣು ಬಂದಿದೆ ಕೊಳ್ಳಿರಿ ನೀವೀಗ ಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯಹಣ್ಣು ||ಪ|| ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು ಭವರೋಗಗಳನೆಲ್ಲ ಕಳೆವ ಹಣ್ಣು ನವನೀತ ಚೋರನೆಂಬ ಯಮನ ಅಂಜಿಪ ಹಣ್ಣು ಅವನಿಯೊಳು ಶ್ರೀರಾಮನೆಂಬೊ ಹಣ್ಣು ||೧|| ಕೊಳೆತು ಹೋಗುವುದಲ್ಲ ಹುಳಿತು ಹೋಗುವುದಲ್ಲ ಕಳೆದು ಬಿಸಾಡಿಸಿ ಕೊಳ್ಳುವುದಲ್ಲ ಅಳೆದು ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೊದಲ್ಲ ಒಳಿತಾದ ಹರಿಯೆಂಬೊ ಮಾವಿನಹಣ್ಣು ||೨|| ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ ಕಷ್ಟದಿ ಹಣಕೊಟ್ಟು ಕೊಂಬುವುದಲ್ಲ ಸೃಷ್ಟಿಯೊಳಗೆ ನಮ್ಮ ಪುರಂದರವಿಠಲ ಕೃಷ್ಣರಾಯನೆಂಬೊ ಶ್ರೇಷ್ಠವಾದ ಹಣ್ಣು ||೩||

Transliteration

Hannu bandide kolliri niviga Chenna balakrushnanembo cennada baleyahannu ||pa|| Havyakavyada hannu saviva sakkarehannu Bavarogagalanella kaleva hannu Navanita choranemba yamana amjipa hannu Avaniyolu sriramanembo hannu ||1|| Koletu hoguvudalla hulitu hoguvudalla Kaledu bisadisi kolluvudalla Aledu kombuvudalla gili kacci timbodalla Olitada hariyembo mavinahannu ||2|| Kettu naruvudalla bitti beleyod…