Haridasa Sahitya — Vyasadasa
hallu Suddhi
ಹಲ್ಲು ಶುದ್ಧಿ
Composer: Purandara Dasaru · Deity: Hari · Genre: Ugabhoga
Kannada lyrics
(ಹಲ್ಲು ಶುದ್ಧಿ) ಹಲ್ಲು ಬೆಳಗುವಲ್ಲಿ ಬಿಂಬ ಪ್ಲಕ್ಷಪತ್ರೆ ನೆಲ್ಲು ನಿಲ್ಲು ಮಹಾಲಯ ಪುಣ್ಯ ದಿವಸದಿ ಬಲ್ಲಿದೇಕಾದಶಿ ಪಾರ್ವಣ ಅಮಾವಾಸ್ಯೆಯೆ ಇಟ್ಟ ಶಶಿ ರವಿ ಗ್ರಹಣದಲ್ಲಿ ಅಲ್ಲದೆಯ್ಯ ( ಸಲ್ಲದಯ್ಯ? ) ದಂತಕಾಷ್ಠ ಮಲಿನಗಳಿಗೆ ಝಲ್ಲಿಸಿ ನೀರ ಮುಕ್ಕುಳಿಸಿ ಹನ್ನೆರಡು ಬಲ್ಲ ಬುಧರಿಗೆ ಪುರಂದರವಿಠಲ ಇಲ್ಲಿ ಒಲಿವ ಇದನಾಚರಿಸೆ
Transliteration
(hallu Suddhi) Hallu belaguvalli bimba Plakshapatre nellu nillu Mahalaya punya divasadi Ballidekadasi parvana amavasyeye Itta sasi ravi grahanadalli alladeyya Dantakashtha malinagalige Jallisi Nira mukkulisi hanneradu Balla budharige purandaravithala Illi oliva idanacarise