Haridasa Sahitya — Vyasadasa

Halavu jeevanava ondele nungitu

ಹಲವು ಜೀವನವ ಒಂದೆಲೆ ನುಂಗಿತು

Composer: Kanakadasaru · Deity: Hari · Genre: Philosophy

Kannada lyrics

ಹಲವು ಜೀವನವ ಒಂದೆಲೆ ನುಂಗಿತು || ಕಾಗಿ ನೆಲೆಯಾದಿಕೇಶವನು ಬಲ್ಲನೀ ಬೆಡಗ|| ಪ || ಹರಿಯ ನುಂಗಿತು ಹರ ಬ್ರಹ್ಮರ ನುಂಗಿತು ಸುರರಿಗುಂಟಾದ ದೇವರ ನುಂಗಿತು ಉರಿಗಣ್ಣಶಿವನ ಒಂದೆಲೆ ನುಂಗಿತೋ ದೇವ ಹರಿಯ ಬಳಗವ ಒಂದೆಲೆ ನುಂಗಿತು|| 1 || ಎಂಟುಗಜವನು ನುಂಗಿ ಕಂಟಕರೈವರ ನುಂಗಿ ಉಂಟಾದ ಗಿರಿಯ ತಲೆಯ ನುಂಗಿತು ಕಂಟವ ಪಿಡಿದ ಬ್ರಹ್ಮನ ನುಂಗಿತೆಲೊ ದೇವ ಎಂಟಾರು ಲೋಕ ಒಂದೆಲೆ ನುಂಗಿತು|| 2 || ಗಿಡವ ನುಂಗಿತು ಗಿಡದೊಡತೊಟ್ಟ ನುಂಗಿತು ಗಿಡದ ತಾಯಿ ತಂದೆಯ ನುಂಗಿತು ಬೆಡಗ ಬಲ್ಲರೆ ಪೇಳಿ ಬಾಡ ಕನಕದಾಸ ನೊಡೆಯಾದಿಕೇಶವನ ಬಲ್ಲನೀ ಬೆಡಗ|| 3 ||

Transliteration

Halavu jeevanava ondele nungitu kagi neleyadikeshavanu ballani bedaga Hariya nungitu para brahmana nungitu Surariguntaada devara nungitu Uriganna shivana ondele nungitelo deva Hariya balagava ondele nungitu||1|| Entu gajavanu nungi kantakaraivara nungi Untada giriya taleya nungitu Kantava pididu brahmana nungitelo deva Entaru loka ondele nungitu||2|| Gidava nungitu gidadodattotiyanu nungitu Giduvi…