Haridasa Sahitya — Vyasadasa
Hadinalku lokavanaluva tandege
ಹದಿನಾಲ್ಕು ಲೋಕವನಾಳುವ ತಂದೆಗೆ
Composer: Vijaya Dasaru · Deity: Srinivasa / Venkatesha · Genre: Bhakti
Kannada lyrics
ಹದಿನಾಲ್ಕು ಲೋಕವನಾಳುವ ತಂದೆಗೆ | ಮುದದಿಂದ ನಾನೊಬ್ಬ ಭಾರವಾದೆನೆ ||pa|| ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ || ಭರದಿಂದ ಪೋಗಿ ಚೆನ್ನಾಂತು ಪೊತ್ತೆ || ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು | ಭೂತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ ||1|| ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ | ಬೆರಳಲಿ ಧರಿಸಿ ಕಾಯ್ದು ನಿಜದೆ || ವರಮುನಿ ಪಸವನು ಬೇಡಲಾಗಿ ಬೆದರಿ ನರ- | ನರಸಿ ನಿನ್ನ ಕರೆಯೆ ಕರುಣದಲಿ ಪಾಲಿಸಿದೆ ||2|| ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ | ಸಲಹಬೇಕೆಂದು ಬೇಸರಿಸಲಿಲ್ಲಾ || ಸುಲಭದಲಿ ಶೇಷಾಚಲನಾಗಿಪ್ಪ | ಒಲಿದೆನ್ನ ಸಂರಕ್ಷಿಸೊ ವಿಜಯವಿಠ್ಠಲನೆ ||3||
Transliteration
Hadinalku lokavanaluva tandege | Mudadinda nanobba baravadene | pa | Suragiriyu saradhiyolu kadevaga munugalu | Baradinda pogi bennantu potte | Dharaniyu moreyidalu teralalli bandu | Butaruniyanu serebadisi uluhikollalillave | 1 | Surapatimunidelu hagalirulu malegareye | Beralalli dharisi turugala kayde | Varamuni asanavanu bedalu bedari nara | Narasi ninna kareye karunadali paliside | 2 | Jalajak…