Haridasa Sahitya — Vyasadasa
Habba suladi
ಹಬ್ಬ ಸುಳಾದಿ
Composer: Vijaya Dasaru · Deity: Hari · Genre: Sulaadi
Kannada lyrics
ಹಬ್ಬ ಸುಳಾದಿ ಧ್ರುವತಾಳ ಹಬ್ಬಂಗಳಿವೆ ಕೇಳಿ ಊರ್ಬಿಯೊಳಗೆ ವೈ ದರ್ಭರಮಣ ಕರುಣಾಬ್ಧಿ ಒಲಿದ ಬಳಿಕ ಒಬ್ಬರ ಕಾಡಿಬೇಡಿ ಒಬ್ಬರ ಹಬ್ಬ ಮಾಡಿದರಿಂದ ಉಬ್ಬುತೀರದು ಕಾಣೋ ಆರ್ಬುದ ಜನಕ್ಕೆ ಅಬ್ಬಿದಾವರ್ತಿ ಧಾನ್ಯರುಬ್ಬಿಗಂಜಿಯ ಕಾಸಿ ಹಬ್ಬಿದ ಸುಖಮಾನ ವಬ್ಬಿಗೆ ಸತಿಪತಿ ಇಬ್ಬರಾನಂದಲ್ಲಿ ಹೆಬ್ಬಟ್ಟಿನಲ್ಲಿ ಸವಿದು ಸಭ್ಯವಾಗಿಪ್ಪುದು ಹಬ್ಬವೆ ಬಲಹಬ್ಬ ನಿರ್ಭಯವಾದ ರತ್ನಗರ್ಭದಲ್ಲಿ ಕುಟೀರ ಗುಬ್ಬಿಗೂಡಿನಷ್ಟು ಗರ್ಭವಾಸವೆ ರಚಿಸಿ ಹಬ್ಬಿಗಿಕ್ಕದೆ ಏನು ನಿರ್ಬಂಧನವಿಲ್ಲದೆ ಲಭ್ಯವಾಗಿಪ್ಪ ಗರ್ಭದ ಸುಖಿಗಳವರು ಕರ್ಬುರನಂತೆ ತಿಂದು ಕೊಬ್ಬಿ ತಿರುಗುವಂಗೆ ದುರ್ಭಾಗ್ಯವಲ್ಲದೆ ಹಬ್ಬವೆನಿಸುವುದೆ ಕಬ್ಬು ಬಿಲ್ಲಿನಯ್ಯ ವಿಜಯವಿಠ್ಠಲರೇಯ ದರ್ಭೆ ಏ…
Transliteration
Dhruva tala Habbangalive keli urbiyolage vai Darbaramana karunabdhi olida balika Obbara kadibedi obbara habba madidarinda Ubbutiradu kano Arbuda janakke Abbidavarti dhanyarubbiganjiya kasi Habbida sukamana vabbige satipati Ibbaranamdalli hebbattinalli savidu Sabyavagippudu habbave balahabba Nirbayavada ratnagarbadalli kutira Gubbigudinashtu garbavasave racisi Habbigikkade Enu nirbandhanavillade La…