Haridasa Sahitya — Vyasadasa

Guruvina gulamanaguva

ಗುರುವಿನ ಗುಲಾಮನಾಗುವ

Composer: Purandara Dasaru · Deity: Hari · Genre: Philosophy

Kannada lyrics

ಗುರುವಿನ ಗುಲಾಮನಾಗುವ ತನಕ ದೊರಕದಣ್ಣ ಮುಕುತಿ ||pa|| ಪರಿಪರಿಶಾಸ್ತ್ರವನೇಕವನೋದಿ ವ್ಯರ್ಥವಾಯಿತು ಭಕುತಿ||apa|| ಆರು ಶಾಸ್ತ್ರವನೋದಿದರಿಲ್ಲ ಮೂ- ರಾರು ಪುರಾಣವ ಮುಗಿಸಿದರಿಲ್ಲ ಸಾರಿ ಸಜ್ಜನರ ಸಂಗವ ಮಾಡದೆ ಧೀರನಾಗಿ ತಾ ಮೆರೆದರೆ ಇಲ್ಲ||1|| ಕೊರಳೊಳು ಮಾಲೆಯ ಧರಿಸಿದರಿಲ್ಲ ಬೆರಳೊಳು ಜಪಮಣಿ ಎಣಿಸಿದರಿಲ್ಲ ಮರುಳನಂತೆ ಶರೀರಕೆ ಬೂದಿಯ ಒರಸಿಕೊಂಡು ತಾ ತಿರುಗಿದರಿಲ್ಲ||2|| ನಾರಿಯ ಭೋಗ ಅಳಿಸಿದರಿಲ್ಲ ಶರೀರಕೆ ಸುಖವ ಬಿಡಿಸಿದರಿಲ್ಲ ನಾರದ ವರದ ಶ್ರೀ ಪುರಂದರವಿಠಲನ ಮರೆಯದೆ ಮನದೊಳು ಬೆರೆಯುವ ತನಕ||3||

Transliteration

Guruvina gulamanaguva tanaka Dorakadanna mukuti ||pa|| Pariparisastravanekavanodi Vyarthavayitu Bakuti||apa|| Aru sastravanodidarilla mu- Raru puranava mugisidarilla Sari sajjanara sangava madade Dhiranagi ta meredare illa||1|| Koralolu maleya dharisidarilla Beralolu japamani enisidarilla Marulanamte sarirake budiya Orasikondu ta tirugidarilla||2|| Nariya boga alisidarilla Sarirake sukava bidisida…