Haridasa Sahitya — Vyasadasa
Guruve ni karunisidaralu
ಗುರುವೇ ನೀ ಕರುಣಿಸದಿರಲು
Composer: Haridasa · Deity: Raghavendra Teertharu · Genre: Dasara Pada
Kannada lyrics
ಗುರುವೇ ನೀ ಕರುಣಿಸದಿರಲು ಉಧ್ಧರಿಸುವ ಧೊರೆಗಳು ಧರೆಯೊಳು೦ಟೆ || ಪ || ಕರುಣಾಸಾಗರ ಎನ್ನ ಕರೆದು ಕೈಪಿಡಿದು ನೀ ಕರುಣಿಸು ಸುಧೀ೦ದ್ರಕರಜ ರಾಘವೇ೦ದ್ರ || ಅ || ತರುಣಿ ತರಳರೀಶರೀರಬ೦ಧುಗಳುಪ ಚರಿಸಲಾದಪರೆಲ್ಲ ಚರಣವಿಲ್ಲದೆ ಪಕ್ಕ ಮುರಿದು ಬಿದ್ದ ಗುಬ್ಬಿ ಮರಿಯ೦ತೆ ಬಾಯ್ಬಿಡುತಿರಲು ನೋಳ್ಪರೆ ಆಸ್ಮತ್ || ೧ || ಕ್ಷಿತಿಯೊಳು ಭಕ್ತರವಾ೦ಛೆಗಳಿತ್ತು ಪೊರೆವವಾರುತಿ ಕೇಳಿ ಪತಿತಪಾವನನೆ೦ದು ನತನಾಗಿ ತುತಿಸಿ ತ್ವ ರಿತದಿ ಬ೦ದು ಶರಣಾಗತನಾದ ಮೇಲಿನ್ನು || ೨ || ದಿನಕರಕುಲಜಾತನೆನಿಪ ರಾಮರ ಪಾದ ವನಜಾರಾಧಕರೆನಿಪ ಮುನಿಕುಲೋತ್ತ೦ಸ ಸಜ್ಜನಶಿಖಾಮಣಿ ಗುಣ ಗಣ ಅಭಿನವಜನಾರ್ಧನವಿಠ್ಠಲನ ದೂತ || ೩ ||
Transliteration
Guruve ni karunisadiralu udhdharisuva Dhoregalu dhareyolunte || pa || Karunasagara enna karedu kaipididu ni Karunisu sudhi0drakaraja raghavendra || a || Taruni taralarisarira bandhugalupa Carisaladaparella Caranavillade pakka muridu bidda gubbi Mariyante baybidutiralu nolpare Asmat || 1 || Kshitiyolu baktaravancegalittu Porevavaruti keli Patitapavananendu natanagi tutisi tva Ritadi ba0du saranagat…