Haridasa Sahitya — Vyasadasa
Guruve karunadinda
ಗುರುವೆ ಕರುಣದಿಂದ
Composer: Haridasa · Deity: Raghavendra Teertharu · Genre: Dasara Pada
Kannada lyrics
ಗುರುವೆ ಕರುಣದಿಂದ ನೋಡೋ – ನಿನ್ನ ತರಳನೆಂದು ದಯಮಾಡೋ || ಪ || ದುರುಳರೊಳತಿದುರುಳ ನರ ನಾ ಮೊರೆಯ ಪೋಗುವೆನು – ಪೊರೆಯೊ ಅಸ್ಮದ್ಗುರುವೆ || ಅ || ಸುಧೀಂದ್ರಕರಕಂಜಜಾತ – ಈ ವ ಸುಧೆಯೊಳು ಪರಮಪ್ರಖ್ಯಾತ ಸದಮಲ ಶುಭಗುಣನಿಧಿ ನಿರ್ಮಲಜ್ಞಾನ ಪ್ರದ ಪ್ರೇಕನಾಗಿ ಮದಡಮತಿಯ ಬಿಡಿಸೋ ಪದುಮನಾಭನ ಪದಪದುಮ ಪದೋಪದೆಗೆ ಹೃದಯದಿ ಮುದದಿ ಧೇನಿಪ – ಮುದಮುನಿಮತ ಉದಧಿಗೆ ಚಂದ್ರ || ೧ || ಪಂಚಬಾಣನ ನಿರಾಕರಿಸಿ – ಪಂಚ ಪಂಚಕರಣವ ಸ್ವೀಕರಿಸೀ ಪಂಚಮುಖನೆ ಪರನೆಂಬ ವಾದಿಯ ಮತ ಮುಂಚೆ ಮುರಿದನೆಂದು ಸಂಚಕಾರವ ಪಿಡಿದು ಸಂಚರಿಸಿ ಅವರುಕುತಿ ನಿಲ್ಲಿಸಿ ಪ್ರಪಂಚದೊಳಗಿಹ ಸರ್ವಜಮನನೋವಾಂಛಿತವಗರೆದವ ನೀ ಮುನ್ನ ಪೊರೆದಂತೆ ಎನ್ನ || ೨ || ದೇಶದೇಶದಿ ತ…
Transliteration
Guruve karunadinda nodo – ninna Taralanendu dayamado || pa || Durularolatidurula nara na Moreya poguvenu – poreyo asmadguruve || a || Sudhindra karakanjajata – I va Sudheyolu paramaprakyata Sadamala subagunanidhi nirmalaj~jana Prada prekanagi madadamatiya bidiso Padumanabana padapaduma padopadege Hrudayadi mudadi dhenipa – mudamunimata udadhige chandra || 1 || Panchabanana nirakarisi – panca Panca…