Haridasa Sahitya — Vyasadasa

Gururayara nambiro

ಗುರುರಾಯರ ನಂಬಿರೋ

Composer: Purandara Dasaru · Deity: Sri Madhwacharyaru · Genre: Bhakti

Kannada lyrics

ಗುರುರಾಯರ ನಂಬಿರೋ ಮಾರುತಿಯೆಂಬ ಗುರುರಾಯರ ನಂಬಿರೋ | ಪ | ಗುರುರಾಯರ ನಂಬಿ ಬಿಡದೆ ಯಾವಾಗಲೂ ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ | ಅ ಪ | ವನಧಿಯ ಮನೋವೇಗದಿ ಲಂಘಿಸಿ ಮಹೀ ತನುಜೆ ಶೋಕವ ತರಿದು ವನವ ಬೇರೊಡನೆ ಕಿತ್ತೀಡಾಡಿ ಇದಿರಾದ ದನುಜರ ಬಡೆದು ಲಂಕೆಯ ತನ್ನ ಸಖಗಿತ್ತ | ೧ | ಕೌರವ,ಬಕ , ಹಿಡಿಂಬ ಕೀಚಕರೆಂಬ ದುರಳ ಸಂತತಿ ನೆಗ್ಗೊತ್ತಿ ಘೋರ ಪಾತಕಿ ದುಶ್ಯಾಸನನ ರಕುತವ ಹೀರಿ ಮುದದಿ ಮುರವೈರಿಯ ಭಜಿಸಿದ | ೨ | ಜೀವೇಶ ಒಂದೇ ಎಂಬ ದುರ್ವಾದಿಯ ಭಾವಶಾಸ್ತ್ರವ ಮುರಿದು ಕೋವಿದರಿಗೆ ಸದ್ಭಾಷ್ಯವ ತೋರಿದ ದೇವ ಪುರಂದರ ವಿಠಲ ಸೇವಕರಾದ | ೩ |

Transliteration

Gururayara nambiro, marutiyemba gururayara nambiro ||pa|| Gururayara nambi bidade yavagalu Duritava kaledu sadgatiya padevarella ||a.pa|| Vanadhiya manovegadi ,langisi mahi- Tanujeya sokava taridu Vanava berodane kittadi arbatisida Danujara badidu lankeya tanna sakagitta || Kaurava baka hidimba, kichakaremba Durula santati neggotti Gora pataki dusyasanana rakutava Hiri mudadi muravairiya Bajisida…