Haridasa Sahitya — Vyasadasa
Gururaya gururaya
ಗುರುರಾಯ ಗುರುರಾಯ
Composer: Haridasa · Deity: Raghavendra Teertharu · Genre: Dasara Pada
Kannada lyrics
ಗುರುರಾಯ ಗುರುರಾಯ || ಪ || ದುರಿತ ಕಳೆಯೊ ದಯಾಸಾಂದ್ರ – ರಾಘವೇಂದ್ರ || ಅ || ನಮಿಸುವೆ ನಿನ್ನಡಿಗಮಿತ ವಿಧದಿ ಮಮಶ್ರಮಗಳ ಕಳೆಯೊ ಹೇ ವಿಮಲಸುತೇಜ || ೧ || ಆರ್ತಜನರ ಇಷ್ಟಾರ್ಥಗಳನ್ನೆಲ್ಲ ಪೂರ್ತಿಗೊಳಿಸಿ ಕೃತಾರ್ಥರ ಮಾಡುವಿ || ೨ || ಪವನರ ವರಮತಪ್ರವರನೆನಿಸಿ ಶ್ರೀವರನರ್ಚಿಸುತಿಹ ಯತಿಕುಲತಿಲಕ || ೩ || ಸರ್ವತ್ರದಿ ಹರಿ ಇರುವುದ ನೋಡಿ ಪೂರ್ವದೇವತೆಗಳ ಗರ್ವಹರನೆ ಮದ್ಗುರುರಾಯ || ೪ || ನೀನೆ ಗತಿಯೊ ಹೇ ದೀನವತ್ಸಲನೆ ಜ್ಞಾನವನು ಕೊಡು ನಾನೆಂಬುದ ಕಳೆ || ೫ || ಪತಿತನು ನಾ ನಿಮ್ಮತಿಶಯ ಗುಣಗಳ ತುತಿಸಬಲ್ಲೆನೆ ಯತಿಕುಲವರ್ಯ || ೬ || ಮಾರುತಿವರದ ರಮಾಪತಿವಿಠ್ಠಲನ ತಾರತಮ್ಯ ತಿಳಿಸ್ಯಾರಾಧನೆ ಕೊಡು || ೭ ||
Transliteration
Gururaya gururaya || pa || Durita kaleyo dayasandra – raghavendra || a || Namisuve ninnadigamita vidhadi Mamasramagala kaleyo he vimalasuteja || 1 || Artajanara ishtarthagalannella Purtigolisi krutarthara maduvi || 2 || Pavanara varamatapravaranenisi Srivaranarcisutiha yatikulatilaka || 3 || Sarvatradi hari iruvuda nodi Purvadevategala garvaharane madgururaya || 4 || Nine gatiyo he dinavatsalane J…