Haridasa Sahitya — Vyasadasa
Gururaja guru sarvabauma
ಗುರುರಾಜಾ ಗುರು ಸಾರ್ವಭೌಮ
Composer: Jagannatha Dasaru · Deity: Raghavendra Teertharu · Genre: Dasara Pada
Kannada lyrics
ಗುರುರಾಜಾ ಗುರು ಸಾರ್ವಭೌಮ ||pa|| ಗುರುರಾಜಾ ಗುರಸಾರ್ವಭೌಮ ನಿನ್ನಯ ಪಾದ ಸರಸಿಜಯುಗಕಭಿ ನಮಿಸುವೇ ||a.pa|| ಕರುಣ ಸಾಗರನೆಂದು ಚರಣವ ನಂಬಿದೆ ಶರಣನ ಪಾಲಿಸು ಕರುಣಿಯೇ ||1|| ಅನ್ಯರ ಭಜಿಸದೆ ನಿನ್ನನ್ನೆ ಭಜಿಸುವೆ ಎನ್ನ ಮರೆವೊದಿದು ನ್ಯಾಯವೇ ||2|| ಬೇಡಿದ ಮನೋರಥ ನೀಡುವ – ನೀನಿರೆ ಬೇಡೆನೆ ನರರನ್ನ ನೀಡೆಂದೂ ||3|| ಜ್ಞಾನಿ ಗಳರಸನೆ ಮೌನಿ ಶಿರೋಮಣಿ ಧ್ಯಾನವ ಸಂತತ ನೀಡಯ್ಯಾ ||4|| ಸಂತತ ಎನ ಮನೊ – ಅಂತರದಲಿ ನೀ ನಿಂತು ಪಾಲಿಸೊ ಎನ್ನ ಮಹರಾಯಾ ||5|| ನಿನ್ನಲ್ಲಿ ಹರಿ ದಯ – ಉನ್ನತ ಇರಲಿನ್ನು ಎನ್ನಲ್ಲಿ ನಿನ ದಯ ಇರಲಯ್ಯ ||6|| ದಾತಗುರು ಜಗನ್ನಾಥ ವಿಠಲ ನಿನ್ನ ಮಾತು ಲಾಲಿಸಿದಂತೆ ಪೊರೆ ಎನ್ನಾ ||7||
Transliteration
gururaja guru sarvabauma | sri guru raja guru sarvabauma| pa | gururaja guru sarvabauma ninnaya pada | sarasija yugakabinamisuve | a.pa. | karuna sagaranendu charanava nambide | saranana palisu karuniye | 1 | anyara bajisade ninnanne bajisuve | enna marevudu nyayave | 2 | bedida manoratha niduva ninire | bedenu nararanna nidendu | 3 | j~janigalarasane mauni siromani | dhyanava samtata nidayya | 4…