Haridasa Sahitya — Vyasadasa

Gurugala anudina neneve naa

ಗುರುಗಳನನುದಿನ ನೆನೆವೆ ನಾ

Composer: Pranesha Dasaru · Deity: Vishnu · Genre: Dasara Pada

Kannada lyrics

ಗುರುಗಳನನುದಿನ ನೆನೆವೆ ನಾ ದುರಿತ ದಟ್ಟುಳಿ ಸಾರೆ ಬಂದೀತಿನ್ನೇನಾ || ಪ || ಪಾರ್ಥ ರಕ್ಷಕನ ಸೇ ವಾರ್ಥ ಖಳರ ಕೊಂದು ಕೀರ್ತಿ ಪಡೆದ ಸುಖ ತೀರ್ಥರೆಂತೆಂಬಾ || 1 || ನೀ ಪಾಲೀಸೆಂದೆನಲಾಪತ್ತು ಬಿಡಿಸುವ ಮಾಪತಿ ನಿಜದೂತ ಶ್ರೀ ಪದ್ಮನಾಭ || 2 || ಕರಿಪತಿ ಬಳಿಯಿಂದ ಧರಿಜ ಪತಿಯ ತಂದು ಗುರುಗಳಿಗಿತ್ತೀಹ ನರಹರಿ ತೀರ್ಥಾ || 3 || ಬಾದರಾಯಣ ದಿವ್ಯ ಪಾದ ಜಲಜ ಭೃಂಗ ಭೂದೇವ ವಂದಿತ ಮಾಧವ ತೀರ್ಥ || 4 || ಇಕ್ಷುಚಾಪನ ಮ್ಯಾಳ ಲಕ್ಷ್ಮೀ ಇಲ್ಲದೆ ಬಲು ಪೇಕ್ಷೆ ಮಾಡಿದ ಅಕ್ಷೊಭ್ಯ ಮುನಿಪ || 5 || ದಯಮಾಡಿರೆಂದು ವಿ ನಯದಿಂದ ಭಜಿಪರ ಬಯಕೀ ಪೂರೈಸುವ ಜಯತೀರ್ಥರೆಂಬ || 6 || ಅದ್ವೈತ ಗಜ ಸಿಂಹ ಮಧ್ವ ಮತೋದ್ಭವ ಸದ್ವೈಷ್ಣವ ಪ್ರೀಯ ವಿದ…

Transliteration

gurugaLananudina neneve nA durita daTTuLi sAre bandItinnEnA || pa || pArtha rakShakana sE vArtha KaLara kondu kIrti paDeda suKa tIrtharenteMbA || 1 || nI pAlIsendenalApattu biDisuva mApati nijadUta SrI padmanABa || 2 || karipati baLiyinda dharija patiya tandu gurugaLigittIha narahari tIrthA || 3 || bAdarAyaNa divya pAda jalaja BRunga BUdEva vandita mAdhava tIrtha || 4 || ikShucApana myALa lakShmI…