Haridasa Sahitya — Vyasadasa

Guru vijaya vittala ninna

ಗುರು ವಿಜಯವಿಠಲ ನಿನ್ನ ಚರಣಯುಗಳಿಗೆ

Composer: Gopala Dasaru · Deity: Vijaya Dasaru · Genre: Bhakti

Kannada lyrics

ಗುರು ವಿಜಯವಿಠಲ ನಿನ್ನ ಚರಣಯುಗಳಿಗೆ ಎರಗಿ ನಮೋ ನಮೋ ಎಂದೆನೊ ಹರುಷದಲಿ ನೀ ನಮ್ಮ ಗುರು ವಿಜಯದಾಸರನ ಕರುಣಿಸಿ ತಂದು ತೋರು ಬಾರೊ || ಪ || ಹಿಂದೆ ನೀನಿವರ ಪುರಂದರದಾಸರ ಮಂದಿರದಲಿ ಸೃಜಿಸಿ ಚೆಂದ ಚೆಂದದ ಪರತತ್ವ ಕವನಗಳನ್ನು ಕುಂದುಯಿಲ್ಲದಲೆ ನುಡಿಸಿ ಸಂದರುಶನವಿತ್ತು ಸಲಹಿ ಆಗಾಮಿಯನು ಮಂದಸಂಚಿತವನಳಿಸಿ ನಿಂದ ಪ್ರಾರಬ್ಧ ಉಣ ತಂದಿಟ್ಟು ಈ ಧರೆಗೆ ಮಂದಜನರನ್ನ ಪೊರಿಯೊ ಪರಿಯ || 1 || ಆರುಮೂರೆರಡೊಂದು ಜನರು ಇವರಿಂದ ಉ- ದ್ಧಾರ ಗತಿಯನು ಚಿಂತಿಸಿ ಮೂರು ಜನ್ಮಗಳಲಿ ಬಿಡದೆ ಮೂಲವ ಕೆಡದೆ ಸೇರಿ ಮತ್ತಿವರ ಬಳಿಯ ಶ್ರೀರಮಣ ನಿನ್ನ ವಿಚಾರವನು ಮಾಡುತ ಸಾರಿಸಾರಿ ವರವಪಿಡಿದು ಕಾರಣರು ನಮಗಿ ವರು ಕರ್ಮಮೂಲವ ಕೆಡಿಸಿ ನಾರಾಯಣನೆ ನಿನ…

Transliteration

Hinde ninivara purandaradasara mandiradali srujisi Cenda cendada paratatva kavanagalannu Kunduyilladale nudisi sandarusanavittu salahi agamiyanu Mandasancitavanalisi ninda prarabdha una Tandittu I dharege mandajanaranna poriyo pariya || 1 || Arumureradondu janaru ivarinda u- Ddhara gatiyanu cimtisi muru janmagalali Bidade mulava kedade seri mattivara baliya Sriramana ninna vicaravanu maduta Sarisa…