Haridasa Sahitya — Vyasadasa

Guru vadiraja yatiya nenasuvadu

ಗುರು ವಾದಿರಾಜ ಯತಿಯಾ ನೆನಸುವದು

Composer: Vijaya Dasaru · Deity: Vadirajaru · Genre: Bhakti

Kannada lyrics

ಗುರು ವಾದಿರಾಜ ಯತಿಯಾ ನೆನಸುವದು ನಿರುತ ಕರುಣಿಪ ಮತಿಯಾ ||pa|| ಆರ್ತನಾ ಸರಿದಾರು ನವನ ವರ್ತಮಾನವನೆ ಕೇಳಿ ಕರ್ತೃತ್ವ ಪರಿಹರಿಸಿ ಸಂಸೃತಿಯ ಗರ್ತದಿಂದೆತ್ತಿ ನೋಳ್ಪ ||1|| ದುರಿತ ರಾಶಿಗಳ ಶೀಳಿ ಹೊರದೆಗೆದು ಮರುತ ಶಾಸ್ತ್ರವನೆ ಪೇಳಿ ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿ ಧರಿಯೊಳಗೆ ಮೆರೆದೆ ಧೀರ ||2|| ವಂದಿಸಿ ಸೌಂದರ್ಯಪುರಿಯ ವಾಸ ವರಪ್ರದ ನಂದ ಸತ್ಕೀರ್ತಿ ಭೂಪ ವಂದಿಸಿದವರಿಗೆ ಲೇಸಾಗಿ ಕೊಡುವ ಮು ಕುಂದನಂಘ್ರಿಯ ದಾಸ ||3|| ತೀರ್ಥಯಾತ್ರೆಯನೆ ಮಾಡಿ ಹರಿ ಭೇದಾರ್ಥದಿಂದಲೆ ಕೊಂಡಾಡಿ ಅರ್ಥಾಸೆಗಳ ಈಡಾಡಿ ಹಯಮೊಗನ ಅರ್ಥಿಯಿಂದಲಿ ಪೂಜಿಪ||4|| ತ್ರಿಜಗದೊಳಗಿನವರಿಗೆ ಎಣೆಗಾಣೆ ಕುಜನ ಮತ ಸೋಲಿಸುವಲ್ಲಿ ವಿಜಯವಿಠ್ಠಲನೆ ದೈವ…

Transliteration

Guru vadiraja yatiya nenasuvadu Niruta karunipa matiya ||pa|| Artana saridaru navana Vartamanavane keli Kartrutva pariharisi samsrutiya Gartadindetti nolpa ||1|| Durita rasigala sili horadegedu Maruta sastravane peli Paramartha margava tori sukabadisi Dhariyolage merede dhira ||2|| Vandisi saundaryapuriya vasa varaprada Nanda satkirti bupa Vandisidavarige lesagi koduva mu Kundanangriya dasa ||3||…