Haridasa Sahitya — Vyasadasa
Srinivasa stotra sulaadhi
ಶ್ರೀನಿವಾಸನ ಸ್ತೋತ್ರ ಸುಳಾದಿ
Composer: Guru Srisha Vittala Dasaru / Kuntoji Narasimhadasaru · Deity: Hari · Genre: Sulaadi
Kannada lyrics
ಶ್ರೀನಿವಾಸನ ಸ್ತೋತ್ರ ಸುಳಾದಿ ರಾಗ ಪೂರ್ವಿಕಲ್ಯಾಣಿ ಧ್ರುವತಾಳ ಶ್ರೀನಿವಾಸನೆ ನಿನಗೇನು ಬಿನ್ನೈಸಲೋ ಧೇನಿಸಿದರೆ ಎನಗಾಶ್ಚರ್ಯ ತೋರುತಿದೆ ಅನಾದಿ ಕಾಲದಿಂದ ಸೃಷ್ಟಾದಿ ವ್ಯಾಪಾರ ನೀನೆ ಮಾಡಿಸುವೆಂದು ಶಾಸ್ತ್ರಸಿದ್ಧ ಜ್ಞಾನಿಗಳು ಹೀಗೆ ತಿಳಿದು ಪೇಳುವರಯ್ಯಾ ಈ ನೀತಿ ನೋಡಿದರೆ ಪುಶಿಗಾಣದು ಹೀನ ಜ್ಞಾನಗಳಿಂದನೇಕ ಭವಣಿ ಬಡುತ ನಾನಾ ಯೋನಿಗಳಲ್ಲಿ ಸಂಚರಿಸುವ ಈ ನಡತೆಯ ನೋಡೆದಾರಿಂದಲಾಗುವದು ಶ್ರೀನಾಥ ನೀನೆ ದಯದಿ ತಿಳಿಸಬೇಕು ತಾನೆ ಮಾಡುವ ಜೀವನೆಂದು ಯೋಚನೆ ಮಾಡೆ ಅನಾದಿಯಿಂದ ಶಕ್ತಿಶೂನ್ಯ ಅಲ್ಪಾ ಕಾಣ ತನ್ನ ಸ್ವರೂಪ ಇನ್ನಾವದು ಬಲ್ಲನೋ ಜ್ಞಾನಪೂರ್ಣ ಸರ್ವಜ್ಞ ನೀನೇನರಿಯಾ ಜ್ಞಾನ ಕರ್ಮೇಂದ್ರಿ ಮೊದಲಾದ ತತ್ವಗಳನ್ನೆ ಮಾನಿಗಳಿ…