Haridasa Sahitya — Vyasadasa
Srinivasa prarthana sulaadhi
ಶ್ರೀನಿವಾಸನ ಪ್ರಾರ್ಥನಾ ಸುಳಾದಿ
Composer: Guru Srisha Vittala Dasaru / Kuntoji Narasimhadasaru · Deity: Hari · Genre: Sulaadi
Kannada lyrics
ಶ್ರೀನಿವಾಸನ ಪ್ರಾರ್ಥನಾ ಸುಳಾದಿ ರಾಗ ನಾಟಿ ಧ್ರುವತಾಳ ಶ್ರೀನಿವಾಸನೆ ಪೂರ್ಣಜ್ಞಾನನಂದನೆ ಸ್ವಾಮಿ ದೀನವತ್ಸಲ ಕರುಣಿ ಜ್ಞಾನಿಗಳರಸನೆ ಭಾನುಕೋಟಿತೇಜ ಜ್ಞಾನಗಮ್ಯ ಎನ್ನ ಹೀನಮತಿಯ ಬಿಡಿಸಿ ಕಾಯೊ ಕೃಷ್ಣ ಅನಾದಿಕಾಲದಿಂದ ನಾನು ನಿನ್ನವರವ ನೀನೆನರಿಯೆ ಜಗದಂತರ್ಯಾಮಿ ಏನು ಮಾಡುವದೆಲ್ಲ ಹೊರ ಒಳಗೆ ನಿಂತು ನೀನೆ ಮಾಡಿಸುತಿಪ್ಪೆ ತಿಳಿಸದಲೆ ನಾನು ನನ್ನದು ಎಂಬೋ ಹೀನ ಜ್ಞಾನ ಪುಟ್ಟಿಸಿ ಕಾಣಿಸಿಕೊಳುವಲ್ಲಿ ಜಾಣತನದಿ ಕಾಣದ ಕುರುಡಗೆ ಕನ್ನಡಿ ಕೊಟ್ಟಂತೆ ನಾನಾ ಶಾಸ್ತ್ರವು ಓದಿ ಪೇಳಲೇನು ನೀನು ನಿನ್ನವರಿಂದ ಕೂಡಿ ಮಾಡುವ ಚೇಷ್ಟೆ ತಾನರಿಯದ ಮನುಜ ಜ್ಞಾನಿ ಏನೋ ಏನು ಓದಿದರೇನು ಏನು ಪೇಳಿದರೇನು ನೀನೊಲಿಯದಿರೆ ಆನಂದ ಪುಟ್ಟುವದೆ ಜ್ಞಾ…