Haridasa Sahitya — Vyasadasa
Srihari prarthana sulaadhi (Ritigaula)
ಶ್ರೀಹರಿಯ ಪ್ರಾರ್ಥನಾ ಸುಳಾದಿ
Composer: Guru Srisha Vittala Dasaru / Kuntoji Narasimhadasaru · Deity: Hari · Genre: Sulaadi
Kannada lyrics
ಶ್ರೀಹರಿಯ ಪ್ರಾರ್ಥನಾ ಸುಳಾದಿ ರಾಗ ರೀತಿಗೌಳ ಧ್ರುವತಾಳ ಶ್ರೀಪತಿಯೆ ಎನ್ನ ಆಪನಿತು ನಾ ಬೇಡುವೆ ನೀ ಪಾಲಿಸಬೇಕು ಎನ್ನ ಮಾತು ಗೋಪಿಜನಜಾರ ಗೋಪಾಲ ಗೋವಿಂದ ಗೋಪತಿ ಪೂಜ್ಯಪಾದ ಗೋಕುಲದರಸೆ ಶ್ರೀಪುರುಷೋತ್ತಮ ಬೊಮ್ಮಾದಿ ತೃಣಾಂತ ಆ ಪುರುಷರ ಪಾದಸ್ಮರಣೆಯನ್ನು ಸ್ತ್ರೀಪುರುಷರ ತಾರತಮ್ಯ ತತ್ವಶರ ಸ್ವ - ರೂಪ ಸಾಂಶ ಅಂಶ ವಿಹೀನರ ಈ ಪರಿ ದೇಹದಲ್ಲಿ ಪ್ರೇರಕರಾದವರ ವ್ಯಾಪಕರಾಗಿ ನಿನ್ನ ಸೇವಿಪರ ಪಾಪರಹಿತರಾಗಿ ಧರಿಯಲ್ಲಿ ಪುಟ್ಟಿ ಸ್ವ - ರೂಪ ವ್ಯಕ್ತ ಅವ್ಯಕ್ತರಾದವರ ವ್ಯಾಪಕನಾದ ನಿನ್ನ ರೂಪ ತಿಳಿದು ಸರ್ವ - ವ್ಯಾಪಾರ ಆನಂದದಿ ತುತಿಸುವರ ಶ್ರೀಪರಮಾತ್ಮನೆ ಇಂತಿಪ್ಪ ಭಕುತರ ನಾ ಪಾಡಿ ಪೊಗಳುವಂತೆ ಜ್ಞಾನವಿತ್ತು ನೀ ಪೋಷಿಸಯ್ಯಾ ಅವರ…