Haridasa Sahitya — Vyasadasa
Srihari prarthana sulaadhi (Ranjini)
ಶ್ರೀಹರಿಯ ಪ್ರಾರ್ಥನಾ ಸುಳಾದಿ
Composer: Guru Srisha Vittala Dasaru / Kuntoji Narasimhadasaru · Deity: Hari · Genre: Sulaadi
Kannada lyrics
ಶ್ರೀಹರಿಯ ಪ್ರಾರ್ಥನಾ ಸುಳಾದಿ ರಾಗ ರಂಜಿನಿ ಧ್ರುವತಾಳ ನಮೊ ನಮೊ ಶ್ರೀಹರಿಯೆ ನಮೊ ನಮೊ ಎನ್ನ ದೊರಿಯೇ ನಮೊ ನಮೊ ಎಂಬೆ ನಿನಗೆ ಸುಮನಸರೊಡಿಯನೆ ನಿನ್ನ ಸಮರೆನಿಪರಿಲ್ಲ ರಮೆ ಮೊದಲಾದ ಸರ್ವ ಸುರರೊಳಗೆ ಅಮಿತ ಜೀವರೊಳಗೆ ಅಧಮಾಧಮನು ನಾನು ನಿಮಿಷವಾದರು ನಿನ್ನ ಸ್ಮರಿಸಲಿಲ್ಲ ಸುಮತಿಗಳನ್ನು ಬಿಟ್ಟು ಕುಮತಿಗಳನ್ನು ಕೂಡೆ ಮಮತೆ ವಿಷಯದಲ್ಲಿ ಘನವಾಯಿತೊ ಮಮಕುಲ ದೈವವೆ ಸುಮುಖವಾಗಲಿಬೇಕೊ ವಿಮುಖವಾದರೆ ಎನಗಿನ್ನಾವ ಗತಿಯೊ ಸಮಯ ಇದೆ ನರಜನ್ಮ ಬಂದಾಗಲೆ ಪೊರಿಯಯ್ಯಾ ಅಂದು ಕ್ರಿಮಿಕೀಟ ಜನುಮದಲ್ಲಾವ ಸಾಧನವೊ ರಮೆಯರಸನೆ ಗುರುಶ್ರೀಶವಿಟ್ಠಲ ನಿನ್ನ ಮಮತೆ ಒಂದಿರೆ ನಾನು ಒಂದು ಬೇಡುವದಿಲ್ಲ || 1 || ಮಟ್ಟತಾಳ ನಿನ್ನ ಧ್ಯಾನವ ಕೊಡೊ ಎನ್ನ…