Haridasa Sahitya — Vyasadasa
Srihari prarthana sulaadhi (Chakravaka)
ಶ್ರೀಹರಿಯ ಪ್ರಾರ್ಥನಾ ಸುಳಾದಿ
Composer: Guru Srisha Vittala Dasaru / Kuntoji Narasimhadasaru · Deity: Hari · Genre: Sulaadi
Kannada lyrics
ಶ್ರೀಹರಿಯ ಪ್ರಾರ್ಥನಾ ಸುಳಾದಿ ರಾಗ ಚಕ್ರವಾಕ ಧ್ರುವತಾಳ ಹರಿಯೆ ಉದ್ದರಿಸೆನ್ನ ಪರಮಪುರುಷ ದೊರಿಯೆ ಇರಳು ಹಗಲು ನಿನಗೆ ಮೊರೆ ಇಡುವೆನೊ ಪರಿಪರಿ ಭವಭಯ ದುರಿತಗಳೊಡಿಸಿ ಕರಿವರದನೆ ನಿನ್ನ ಸ್ಮರಣೆಯನ್ನು ಮರೆಯದಂತೆ ನಿನ್ನ ಚರಣಸೇವೆಯೊಳಿಟ್ಟು ಅರದೂರ ನಿನ್ನ ನಿಜದಾಸನೆನಿಸೊ ಗುರುಹಿರಿಯರಲ್ಲಿ ಪರಮ ಭಕುತಿ ಇತ್ತು ವಿರಕುತಿ ವಿಷಯದಲ್ಲಿ ಪುಟ್ಟಿಸಯ್ಯಾ ಕರುಣಸಾಗರ ನಿನ್ನ ಮರಳೊಂದು ಬೇಡೋದಿಲ್ಲ ದುರಿತದೂರನೆ ಇದುವೊಂದು ಮಾತ್ರ ಕರುಣಿಸಬೇಕಯ್ಯಾ ಭಕುತವತ್ಸಲ ಸ್ವಾಮಿ ಸರುವ ರೂಪಾತ್ಮಕ ಸರುವರೊಡಿಯಾ ಚರಾ ಅಚರಗಳಲ್ಲಿ ಪರಿಪರಿ ನಿನ್ನ ರೂಪ ಕುರುಹು ಕಾಂಬುವ ಸುಜ್ಞಾನದಿಂದ ಪರಮ ಭಕುತಿ ಕೊಟ್ಟು ಗರುಡವಾಹನ ನಿನ್ನ ಪರಮಾನಂದವಾದ ವಿಹಾರವ…