Haridasa Sahitya — Vyasadasa
Sadhana sulaadhi
ಸಾಧನ ಸುಳಾದಿ
Composer: Guru Srisha Vittala Dasaru / Kuntoji Narasimhadasaru · Deity: Hari · Genre: Sulaadi
Kannada lyrics
ಸಾಧನ ಸುಳಾದಿ ರಾಗ ನಾದನಾಮಕ್ರಿಯಾ ಧ್ರುವತಾಳ ಮನವೇ ಮರಿಯದಿರು ವನಜನಾಭನ ನಾಮ ದಿನ ದಿನಕಾನಂದ ಅತಿಶಯವೊ ಬಿನಗು ಚಿಂತಿಗಳಿಂದ ಫಲವು ಎಳ್ಳಿನಿತಿಲ್ಲ ಗುಣವಂತನಾಗಿ ಹರಿಯ ಕೊಂಡಾಡೆಲೊ ಬಿನಗು ಜನರ ಕೂಡ ದಿನವು ಕಳಿಯದೆ ಸ - ಜ್ಜನರ ಸೇವಿಸು ಅತಿ ಭಕುತಿಯಿಂದ ಗುಣಪೂರ್ಣ ಗುರುಶ್ರೀಶವಿಟ್ಠಲ ತನ್ನ ನಂಬಿದ ಜನರ ಕೈಬಿಡದೆ ಪೋಷಿಸುತಿಪ್ಪನೊ || 1 || ಮಟ್ಟತಾಳ ನಿತ್ಯದಲ್ಲಿ ಹರಿಯ ಉತ್ತಮ ಗುಣ ತಿಳಿದು ಹೊತ್ತು ಹೊತ್ತಿಗೆ ಏಕಚಿತ್ತದಿ ಸ್ಮರಿಸದಲೆ ಮತ್ತಾರ ಬಳಿವಿಡಿದು ಮತ್ತೆ ಸತಿಸುತರ ಹತ್ತಿ ಹೊಂದಿದವರ ನೃತ್ಯನು ತಾನಾಗಿ ಎತ್ತ ನೋಡಿದರತ್ತ ವಿತ್ತಗೋಸುಗವಾಗಿ ಉತ್ತಮಧಮರೆನದೆ ಸುತ್ತುತ ಮನೆಗಳಲ್ಲಿ ಹೆತ್ತ ತಂದಿಯ ಗಂಟು ಇತ್ತ ಪುರುಷ…