Haridasa Sahitya — Vyasadasa

Guru raghavendrane karuni

ಗುರು ರಾಘವೇಂದ್ರನೆ ಕರುಣಿ

Composer: Haridasa · Deity: Raghavendra Teertharu · Genre: Dasara Pada

Kannada lyrics

ಗುರು ರಾಘವೇಂದ್ರನೆ ಕರುಣಿ ನೋಡಬಾರದೆ ಮೊರೆ ಯಾರಿಗಿಡಲೋ ಕರುಣಾಶರಧೇ || ಪ || ಸ್ಮರಿಸಿದವರ ಪೊರೆವೆನೆಂಬ ಬಿರುದು ನಿನ್ನದೆ ವರ ಶರಣರ ಕಲ್ಪತರುವೆ ಎನ್ನ್ಯಾಕೆ ಮರೆತೆ || ೧ || ಕರವ ಮುಗಿದು ನಮಿಸಿ ನಿಮಗೆ ಬಾಯಿ ತೆರೆದೆ ಇದು ಸರಿಯೆ ನಿನ್ನ ಮನಸು ಲೇಶವಾದರು ಕರಗದೆ || ೨ || ಸತತ ಎನ್ನವಗುಣಗಳನ್ನು ಮನಕೆ ತಾರದೆ ನೀ ಬಂದು ಪೊರೆಯೊ ರಘುನಾಥವಿಠ್ಠಲನ ಕೃಪೆಯು ಬಾರದೆ || ೩ ||

Transliteration

Guru ragavendrane karuni nodabarade More yarigidalo karunasaradhe || pa || Smarisidavara porevenemba birudu ninnade Vara saranara kalpataruve ennyake marete || 1 || Karava mugidu namisi nimage bayi terede idu Sariye ninna manasu lesavadaru karagade || 2 || Satata ennavagunagalannu manake tarade ni bandu Poreyo ragunathaviththalana krupeyu barade || 3 ||