Haridasa Sahitya — Vyasadasa

Guru raghavendra tava

ಗುರು ರಾಘವೇಂದ್ರ ತವ

Composer: Haridasa · Deity: Raghavendra Teertharu · Genre: Dasara Pada

Kannada lyrics

ಗುರು ರಾಘವೇಂದ್ರ ತವ ಚರಣ ದರುಶನಕೆ ಬರಲಿಲ್ಲವೆಂದು ಕೋಪವ ಮಾಡ್ವದ್ಯಾಕೊ || ಪ|| ಧನವಿಲ್ಲ ಕೈಯೊಳಗೆ ತನುವಿನಲಿ ಬಲವಿಲ್ಲಾ ಅನುಕೂಲವಿಲ್ಲವೊ ಎನ್ನ ಮನೆಯೊಳಗೆ ಘನ ಸುಪ್ರಯಾಸ ನಿನ ದಾಸಗೊದಗಿದ ಮೇಲೆ ಎನ ಮೇಲೆ ದೋಷವೇನಿರುವದಿದರೊಳಗೆ ||1|| ಗೆಲುವಿಲ್ಲ ಮನದೊಳಗೆ ಫಲವಿಲ್ಲ ಸಂಸಾರ ಬಲೆಯೊಳಗೆ ಸಿಲುಕಿ ನಾ ಬೇಸತ್ತೆನೋ ಹಲುಬುವೆನೊ ದಾರಿದ್ರ್ಯ ಬವಣೆಯನು ತಪ್ಪಿಸಿ ಸುಲಭ ಸಾಧನೆ ಪೇಳಿ ಸಲಹೊ ಗುರುವರನೇ ||2|| ಒಂದು ಬಗೆಯನು ತೋರೋ ಇಂದೇ ನಾ ಹೊರಡುವೆನೂ ಛಂದದಿಂದಲಿ ಪರಿವಾರ ಸಹಿತಾ ತಂದೆ ಹನುಮೇಶ ವಿಠಲನ ಕಂದನೆ ನಿನ್ನ ಬಂದು ನೋಡುವೆ ಮಾಡ್ವೆ ಸೇವೆ ತವ ದೂತಾ ||3||

Transliteration

Guru ragavendra tava charana darushanake baralillavendu kopava madvadyako || pa|| Dhanavilla kaiyolage tanuvinali balavilla Anukulavillavo enna maneyolage Gana suprayasa nina dasagodagida mele Ena mele doshaveniruvadidarolage ||1|| Geluvilla manadolage Palavilla samsara Baleyolage siluki na besatteno Halubuveno daridrya bavaneyanu tappisi Sulaba sadhane peli salaho guruvarane ||2|| Ondu bageyanu t…